ಅನಂತಾಡಿ ಗ್ರಾಮದ ಕರಿಂಕದಲ್ಲಿ ಭಗವಾಧ್ವಜ ಪ್ರತಿಷ್ಠಾಪನೆ…
ಬಂಟ್ವಾಳ: ಅನಂತಾಡಿ ಗ್ರಾಮದ ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅಶ್ವತ್ಥ ಕಟ್ಟೆಯ ಬಳಿ ಭಗವಾಧ್ವಜ ಪ್ರತಿಷ್ಠಾಪನಾ ಕಾರ್ಯಕ್ರಮ ಇಂದು ಊರ ಹಿರಿಯರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಸ್ಥಳೀಯರೂ, ಪುರೋಹಿತರೂ ಆಗಿರುವ ಶ್ರೀ ರಾಧಾಕೃಷ್ಣ ಭಾಗವತ್ ರವರು ಸರ್ವಶ್ರೀಗಳಾದ ರಘುರಾಮ ಭಟ್, ಜನಾರ್ದನ ಆಚಾರ್ಯ ಸಂಕೇಶ,ಮೋನಪ್ಪ ಗೌಡ ತಾಳಿಪಡ್ಪು, ಮತ್ತು ಬಾಲಕೃಷ್ಣ ಶೆಟ್ಟಿ ಕರಿಂಕ ಅವರೊಂದಿಗೆ ಸೇರಿ ಧ್ವಜಾರೋಹಣ ಗೈದರು.
ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಶ್ರೀಯುತ ನರಸಿಂಹ ಶೆಟ್ಚಿ ಮಾಣಿ ,ಭಗವಾಧ್ವಜದ ಮಹತ್ವ,ಪಾವಿತ್ರ್ಯಾತೆ ಮತ್ತು ಪ್ರಸ್ತುತ ಹಿಂದೂ ಸಮಾಜ ಜಾಗೃತರಾಗಬೇಕಾದ ಅನಿವಾರ್ಯತೆಯ ಬಗ್ಗೆ ಈ ಸಂದರ್ಭದಲ್ಲಿ ಮಾತಾಡಿದರು ಹಾಗೂ ಹಿಂದೂ ಸಮಾಜ ಜಾತಿ ಪಂಥ ಬೇಧ ಮರೆತು ಭಗವಾಧ್ವಜ ದ ತತ್ವದಡಿ ಒಂದಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಟ್ಲ ಪಡ್ನೂರು ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸನತ್ ಕುಮಾರ್ ರೈ,ಪಂಚಾಯತ್ ಅಧ್ಯಕ್ಷ ಗಣೇಶ ಪೂಜಾರಿ,ಉಪಾಧ್ಯಕ್ಷ ಕುಸುಮಾಧರ ಗೌಡ,ಪಂಚಾಯತ್ ಸದಸ್ಯರಾದ ಶ್ರೀಮತಿ ಸುಜಾತ ,ಶ್ರೀಮತಿ ಸಂಧ್ಯಾ,ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾ,ನೇರಳಕಟ್ಟೆ ಸಿ.ಎ ಬ್ಯಾಂಕ್ ನಿರ್ದೇಶಕ ವೆಂಕಟೇಶ ಕೋಟ್ಯಾನ್, ಬಂಟ್ವಾಳ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ ಶಿವರಾಮ ಶೆಟ್ಟಿ, ಬೂತ್ ಸಮಿತಿ ಅಧ್ಯಕ್ಷ ಕುಂಜ್ಞಣ್ಣ ಗೌಡ,ಹಿಂದೂ ಜಾಗರಣ ವೇದಿಕೆ ಅನಂತಾಡಿ ಘಟಕದ ಅಧ್ಯಕ್ಷ ಹರೀಶ್ ಗೌಡ, ರಮೇಶ್. ಕೆ .ಮಠ,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯರಾಮ ಆಚಾರ್ಯ,ಪ್ರಮುಖರಾದ ವಿವೇಕ್ ಶೆಟ್ಟಿ, ಕೃಷ್ಣಪ್ಪ ಗೌಡ,ಮೋಹನ್ ಚಂದ್ರ ಶೆಟ್ಟಿ,ಸತೀಶ್ ಕೊಂಬಿಲ, ಉಮೇಶ್ ನಿಡ್ಯಾರ ,ಶಿವಾನಂದ ಶೆಟ್ಟಿ,ಚಂದ್ರಹಾಸ ,ಜೀವನ್ ಶೆಟ್ಟಿ ಕರಿಂಕ,ಕೇಶವ ಗೌಡ ಬಾಕಿಲ,ರತೀಶ್ ಭಂಡಾರಿ, ಶಿವರಾಮ ಸೇರಿದಂತೆ ಹಲವಾರು ಹಿಂದೂ ಬಾಂಧವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದಿನೇಶ್ ಪಿಲಿಚಂಡಿಗುಡ್ಡ ಸ್ವಾಗತಿಸಿದ್ದು ನಾಗೇಶ್ ಭಂಡಾರಿ ಕರಿಂಕ ನಿರೂಪಿಸಿದರು.ಕಾರ್ಯಕ್ರಮದಲ್ಲಿ ನೆರೆದಿರುವ ಸರ್ವರೂ ಭಗವಾಧ್ವಜ ಕ್ಕೆ ಪುಷ್ಪಾರ್ಚನೆ ಮಾಡಿದರು.ಎಲ್ಲರಿಗೂ ಸಿಹಿ ಹಂಚಲಾಯಿತು.