ಸಂಪಾಜೆ ಗ್ರಾಮದ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ಅನುದಾನ ಬಿಡುಗಡೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಇಲಾಖೆಗೆ ಆದೇಶ- ಟಿ ಎಂ ಶಾಹಿದ್ ತೆಕ್ಕಿಲ್…
ಸುಳ್ಯ:ಕಳೆದ ಹಲವಾರು ವರ್ಷಗಳಿಂದ ಭೂಕಂಪ, ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸು-ಪೆಲ್ತಡ್ಕಕ್ಕೆ ರಸ್ತೆಗೆ 50 ಲಕ್ಷ, ಸಂಪಾಜೆ ಗ್ರಾಮದ ಪೇರಡ್ಕ – ಪೆರುಂಗೋಡಿ ರಸ್ತೆಗೆ 15 ಲಕ್ಷ,ಸಂಪಾಜೆ-ಗಡಿಕಲ್ಲು- ಮುಂಡಡ್ಕ ರಸ್ತೆಗೆ 10 ಲಕ್ಷ, ಕಲ್ಲುಗುಂಡಿ-ಚಟ್ಟೆಕಲ್ಲು ರಸ್ತೆಗೆ 15 ಲಕ್ಷ, ಕಲ್ಲುಗುಂಡಿ- ದಂಡಕಜೆ ಎಸ್ ಸಿ ರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ಹೀಗೆ ಒಟ್ಟು 5 ರಸ್ತೆಗೆ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸರಕಾರದ ಇಲಾಖೆಗೆ ಆದೇಶವನ್ನು ನೀಡಿದ್ದಾರೆ ಎಂದು ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ತಿಳಿಸಿರುತ್ತಾರೆ.