ದ.ಕ- ಜಿಲ್ಲೆಯಲ್ಲಿ ಮಂಗಳವಾರ ಮೂವರಿಗೆ ಕೊರೊನಾ ದೃಢ…

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಮಂಗಳವಾರ) ಮೂರು ಕೋವಿಡ್-19 ಪ್ರಕರಣಗಳು ವರದಿಯಾಗಿದೆ.
ಕತಾರ್ ನಿಂದ ಆಗಮಿಸಿ ಬೆಂಗಳೂರಿನಲ್ಲೇ ಕ್ವಾರೆಂಟೈನ್ ಇದ್ದ 30 ವರ್ಷದ ಇಬ್ಬರು ಪುರುಷರು ಮತ್ತು 37 ವರ್ಷದ ಓರ್ವನಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಸದ್ಯ ಬೆಂಗಳೂರಿನ ಕೋವಿಡ್‌ ಆಸ್ಪತ್ರೆಯಲ್ಲಿ ಮೂವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಉಡುಪಿಯಲ್ಲಿ ಮಂಗಳವಾರ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರು ಮಹಾರಾಷ್ಟ್ರದಿಂದ ಬಂದಿದ್ದು ಅವರಲ್ಲಿ 9 ವರ್ಷದ ಮಗು ಸೇರಿ 27 ವರ್ಷದ ಪುರುಷ , 30 ವರ್ಷದ ಮಹಿಳೆಯಲ್ಲಿ ಸೋಂಕು ಕಂಡುಬಂದಿದ್ದು, ಎಲ್ಲರೂ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಮೇ 25ರ ಸಂಜೆ 5 ಗಂಟೆಯಿಂದ ಮೇ 26ರ ಮಧ್ಯಾಹ್ನ 12 ಗಂಟೆವರೆಗೆ 100 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆಯಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button