ಬಂಟ್ವಾಳ – ಬಿಜೆಪಿ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ…

ಬಂಟ್ವಾಳ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ಬಿ. ಸಿ ರೋಡ್ ನಲ್ಲಿ ಜೂ.21 ರಂದು ನಡೆದ ಯೋಗಾಭ್ಯಾಸ ಕಾರ್ಯಕ್ರಮಕ್ಕೆ ಬಂಟ್ವಾಳ ಶಾಸಕರಾದ ರಾಜೇಶ ನಾಯ್ಕ್
ಉಳಿಪ್ಪಾಡಿಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್,ಸುಲೋಚನಾ ಜಿ.ಕೆ. ಭಟ್, ರಾಮದಾಸ ಬಂಟ್ವಾಳ, ದಿನೇಶ‌ ಅಮ್ಟೂರು, ವಿಹಿಂಪ ಪ್ರಮುಖರಾದ ಪ್ರಸಾದ ಕುಮಾರ್, ರಾಷ್ಟ್ರಿಯ ಸ್ವಯಂಸೇವಕ ಸಂಘದ ತಾಲೂಕು ಸಂಘಚಾಲಕರಾದ ಡಾ.ಬಾಲಕೃಷ್ಣ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

whatsapp image 2024 06 21 at 9.25.13 am

whatsapp image 2024 06 21 at 9.29.00 am

Sponsors

Related Articles

Back to top button