ಜೂ. 23 ರಂದು ಚಿಣ್ಣರ ಲೋಕದ ಶೈಕ್ಷಣಿಕ ಸಂಭ್ರಮ 2024…
ಬಂಟ್ವಾಳ: ಚಿಣ್ಣರಲೋಕ ಸೇವಾ ಬಂಧು ಇದರ ಆಶ್ರಯದಲ್ಲಿ ಶೈಕ್ಷಣಿಕ ಸಂಭ್ರಮ 2024 ಕಾರ್ಯಕ್ರಮವು ಜೂ.23 ರಂದು ಅಪರಾಹ್ನ 3.30 ಕ್ಕೆ ಸ್ಪರ್ಶ ಕಲಾಮಂದಿರ ಬಿ.ಸಿ.ರೋಡಿನಲ್ಲಿ ಜರಗಲಿದೆ ಎಂದು ಚಿಣ್ಣರ ಲೋಕದ ಆಡಳಿತ ಟ್ರಸ್ಟಿ ತೇವು ತಾರನಾಥ ಕೊಟ್ಟಾರಿ ತಿಳಿಸಿದರು.
ಅವರು ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.
ಕರಾವಳಿ ಕಾಲೇಜು ಸಂಸ್ಥೆ ಮಂಗಳೂರಿನ ಸ್ಥಾಪಕ ಅಧ್ಯಕ್ಷ ಎಸ್. ಗಣೇಶ ರಾವ್ ದೀಪಜ್ವಲನೆ ಮಾಡಲಿರುವರು. ಭಯಂಕೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ಸೋಮಯಾಜಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ , ವಿದ್ಯಾರ್ಥಿ ವೇತನ , ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನಡೆಯಲಿದೆ. ಬಳಿಕ ಝೀ ಕನ್ನಡ ಚಲನಚಿತ್ರ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಚಿಣ್ಣರ ಲೋಕ ತಂಡದಿಂದ ರಸಮಂಜರಿ, ಮೋಕೆದ ಕಲಾವಿದರಿಂದ ಶೈಕ್ಷಣಿಕ ದತ್ತು ನಿಧಿಯ ಸಹಾಯಾರ್ಥವಾಗಿ ಮೋಹನ್ ದಾಸ ಕೊಟ್ಟಾರಿ ನಿರ್ದೆಶನದ ‘ಖರ್ಚಿಗ್ ಕಾಸ್ ಇಜ್ಜಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಚಿನ್ನರಲೋಕದ ಗೌರವ ಸಲಹೆಗಾರ ಸರಪಾಡಿ ಅಶೋಕ ಶೆಟ್ಟಿ, ಉಪನ್ಯಾಸಕ ಜಯಾನಂದ ಪೆರಾಜೆ, ಶಾಲಾ ದತ್ತುಸಮಿತಿ ಸಂಚಾಲಕ ರಾಮಕೃಷ್ಣ ರಾವ್, ಸಹಸಂಚಾಲಕ ಐತ್ತಪ್ಪ ಪೂಜಾರಿ, ಮೋಕೆದ ಕಲಾವಿದರು ಸಂಚಾಲಕ ವಿಜಯ ಕುಮಾರ್ ಅಡ್ಯಾರ್, ಚಿನ್ನರ ಲೋಕ ಅಧ್ಯಕ್ಷ ಮೋಹನ್ ದಾಸ್ ಕೊಟ್ಟಾರಿ , ಪದಾಧಿಕಾರಿಗಳಾದ ರಾಜ ಚೆಂಡ್ತಿಮಾರ್, ಸೀತಾರಾಮ ಆಳ್ವ ಕಾಂತಾಡಿ ಗುತ್ತು , ನವೀನ್ ಕುಮಾರ್ , ಮಲ್ಲಿಕ್ ಕೊಳಕೆ, ಇಬ್ರಾಹಿಂ ಕೈಲಾರ್ ಮೊದಲಾದವರು ಉಪಸ್ಥಿತರಿದ್ದು ಸಲಹೆಗಳನಿತ್ತರು.