ಸುಳ್ಯ – ಸಂಪತ್ ಕೊಲೆ ಪ್ರಕರಣ, ಐವರ ಬಂಧನ…

ಸುಳ್ಯ: ಸುಳ್ಯದ ಶಾಂತಿನಗರದಲ್ಲಿ ಗುರುವಾರ ನಡೆದ ಸಂಪತ್ ಕೊಲೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಇಂದು ಸುಳ್ಯ ಠಾಣೆಗೆ ಕರೆತಂದಿದ್ದಾರೆ.

ಗುರುವಾರ ಮುಂಜಾನೆ ಸಂಪತ್ ಮೇಲೆ ಗುಂಡು ಹಾರಿಸಿ, ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೈದು ಆರೋಪಿಗಳು ತಪ್ಪಿಸಿಕೊಂಡಿದ್ದರು. ಮರುದಿನ ಆರೋಪಿಗಳು ಬಳಸಿದ್ದ ಕಾರು ಅರಂತೋಡಿನ ಸಮೀಪ ಪತ್ತೆಯಾಗಿತ್ತು. ಇಂದು ಆರೋಪಿಗಳು ಸುಬ್ರಹ್ಮಣ್ಯ ಸಮೀಪ ಬಿಸಲೆ ಘಾಟ್ ಬಳಿ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುಳ್ಯ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ, ಎಸ್ ಐ ಹರೀಶ್, ಹಾಗೂ ಡಿಸಿಐಬಿ ಪೋಲೀಸರ ಸಹಕಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

IMG 20201011 225009 280x300

Related Articles

Leave a Reply

Your email address will not be published. Required fields are marked *