ಗೂನಡ್ಕ- ತೆಕ್ಕಿಲ್ ಶಾಲಾ ಪ್ರಾರಂಬೋತ್ಸವ…

ಸುಳ್ಯ: ಗೂನಡ್ಕ ತೆಕ್ಕಿಲ್ ಮಾದರಿ ಶಾಲೆಯ 2022-23ನೇ ಸಾಲಿನ ಶಾಲಾ ಪ್ರಾರಂಬೋತ್ಸವ ನಡೆಯಿತು.

ಅಧ್ಯಕ್ಷತೆಯನ್ನು ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್ ವಹಿಸಿದ್ದರು. ನೂತನ ಶಾಲಾ ಆಡಳಿತಾಧಿಕಾರಿ ರಹೀಮ್ ಬೀಜದ ಕಟ್ಟೆ ಹಾಗೂ ದಾಮೋದರ ಮಾಸ್ಟರ್ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ದಿನಕರ ಸಣ್ಣಮನೆ, ಉಪಾಧ್ಯಕ್ಷೆ ದೀಪಿಕಾ, ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಶಾಲಾ ಅಧ್ಯಾಪಕರವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯ ನೂತನ ಆಡಳಿತಾಧಿಕಾರಿ ರಹೀಮ್ ಬೀಜದ ಕಟ್ಟೆ ಅಧಿಕಾರ ಸ್ವೀಕರಿಸಿದರು. ಶಾಲಾ ಶಿಕ್ಷಕಿ ಉಷಾಲತಾ ಸ್ವಾಗತಿಸಿ, ಲೋಕೇಶ್ವರಿ ವಂದಿಸಿದರು. ಶಿಕ್ಷಕಿಯರಾದ ಶ್ರಿಮತಿ ಅನಿತಾ ಹಾಗೂ ತಾಹಿರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.

Related Articles

Back to top button