ಸಜೀಪಮುನ್ನೂರು ಆಲಾಡಿ ತಪೋವನ – ಚಿತ್ರಕಲಾ ಶಿಬಿರ…

ಬಂಟ್ವಾಳ: ಸಜೀಪಮುನ್ನೂರು ಆಲಾಡಿ ತಪೋವನದಲ್ಲಿ ಕರಾವಳಿ ಚಿತ್ರಕಲಾ ಚಾವಡಿ ರಿ ಮಂಗಳೂರು ಇದರ ಆಶ್ರಯದಲ್ಲಿ ಚಿತ್ರಕಲಾ ಶಿಬಿರ ಜರುಗಿತು.
ಪ್ರಕೃತಿಯೊಂದಿಗೆ ಸಾಮರಸ್ಯ ಎಂಬ ವಿಷಯದ ಮೇಲೆ ಚಿತ್ರಕಲಾ ಕಾರ್ಯಾಗಾರ ದಲ್ಲಿ ಜಿಲ್ಲೆಯ 20 ಕಲಾವಿದರು ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಕೋಟಿ ಪ್ರಸಾದ್ ಆಳ್ವ, ಗೌರವಾಧ್ಯಕ್ಷರಾದ ಗಣೇಶ ಸೋಮಯಜಿ, ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಡಾ ಜಯಪ್ರಕಾಶ್ ಮಯ್ಯ ಉಪಸ್ಥಿತರಿದ್ದರು.
ನೇತ್ರಾವತಿ ನದಿ ಕಿನಾರೆಯಲ್ಲಿ ಜರಗಿದ ಈ ಕಾರ್ಯಾಗಾರದಲ್ಲಿ ಜಲವರ್ಣ, ಎಕ್ರಿಲಿಕ್, ಬಣ್ಣದ ಪೆನ್ಸಿಲ್ ,ಚಾರ್ಕೋಲ್ ಸಹಿತ ವಿವಿಧ ಕೋನಗಳಲ್ಲಿ ಚಿತ್ರಗಳನ್ನು ರಚಿಸಲಾಯಿತು. ಡಾ ಎಸ್ ಎಂ ಶಿವಪ್ರಕಾಶ್, ಶರತ್ ಹೊಳ್ಳ, ಈರಣ್ಣ ತಿಪ್ಪಣ್ಣವರ, ಮನೋರಂಜನಿ ಉಪಾಧ್ಯ, ಸುಧೀರ್ ಕಾವೂರು, ಅರುಣ್ ಕಾರಂತ್, ಜ್ಯೋತಿ ಶೆಟ್ಟಿ, ನವೀನ್ ಬಂಗೇರ, ಅನಂತಪದ್ಮನಾಭ, ವಿದ್ಯಾ ಕಾಮತ್, ಜಯಶ್ರೀ ಶರ್ಮಾ, ಜೀವನ್ ಕುಮಾರ ಕದ್ರಿ,ಬಾಲಕೃಷ್ಣ ಶೆಟ್ಟಿ ಮೊದಲಾದವರು ಚಿತ್ರ ರಚಿಸಿದ್ದರು.

Sponsors

Related Articles

Back to top button