ಅಧ್ಯಯನ ತಂತ್ರ ಮತ್ತು ಪರೀಕ್ಷಾ ಸಿದ್ಧತೆ ಕಾರ್ಯಕ್ರಮ…
ಬಂಟ್ವಾಳ:ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಅವರಲ್ಲಿ ಆತ್ಮ ಸ್ಥೈರ್ಯ ಮತ್ತು ಏಕಾಗ್ರತೆಯನ್ನು ಬೆಳೆಸುವ ಮೂಲಕ ಜೀವನದಲ್ಲಿಯೂ ಯಶಸ್ವಿಯಾಗುವಂತೆ ಮಾಡಬೇಕಾಗಿರುವುದು ಅಗತ್ಯವಾಗಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಮ್.ಪಿ ಹೇಳಿದರು
ಅವರು ಪಾಣೆಮಂಗಳೂರು ಶ್ರೀ ಶಾರದಾ ಸಾಂಸ್ಕೃತಿಕ ಕಲಾ ಮಂದಿರದಲ್ಲಿ ಏರ್ಪಡಿಸಲಾದ ಅಧ್ಯಯನ ತಂತ್ರ ಮತ್ತು ಪರೀಕ್ಷಾ ಸಿದ್ಧತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಶಾರದಾ ಹೈಸ್ಕೂಲ್ ನ ಆಡಳಿತ ಟ್ರಸ್ಟಿ ಎನ್ ಶ್ರೀನಿವಾಸ ಕುಡ್ವ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀ ಶಾರದಾ ಪೌಢ ಶಾಲೆಯ ಸಂಚಾಲಕ ಪ್ರಸಿದ್ಧ ವೈದ್ಯ ಡಾ. ಪಿ. ವಿಶ್ವನಾಥ ನಾಯಕ್ ರವರನ್ನು ಅವರ ಸಾಮಾಜಿಕ ಕಾರ್ಯಗಳ ಸಾಧನೆಯನ್ನು ಗುರುತಿಸಿ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಇದರ ರಾಷ್ಟ್ರೀಯ ಪುರಸ್ಕಾರ ಪಿ.ಪಿ.ಎಫ್. ಪ್ರದಾನ ಮಾಡಿ ಗೌರವಿಸಲಾಯಿತು.
ಜೆಸಿಐ ರಾಷ್ಟ್ರೀಯ ತರಬೇತಿದಾರ ಟಿ.ಕೃಷ್ಣ ಮೂರ್ತಿ ಉಜಿರೆ ಮತ್ತು ರಾಜ್ಯ ತರಬೇತುದಾರ ಜಯಾನಂದ ಪೆರಾಜೆ ಮುಖ್ಯ ತರಬೇತುದಾರರಾಗಿ ಶಾರದಾ ಪ್ರೌಢ ಶಾಲೆ ಮತ್ತು ಎಸ್.ಎಲ್.ಎನ್.ಪಿ ವಿದ್ಯಾಲಯದ ಹತ್ತನೇತರಗತಿ ವಿದ್ಯಾರ್ಥಿಗಳಿಗೆ ಅಧ್ಯಯನ ತಂತ್ರದ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷ ಸೀನಿಯರ್ ಡಾ. ಆನಂದ ಬಂಜನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಬಂಟ್ವಾಳ ತಾಲೂಕು ಮತ್ತು ಜಿಲ್ಲೆಯ ಆಯ್ದ ಕೆಲವು ಶಾಲೆಗಳಲ್ಲಿ ಅಧ್ಯಯನ ತಂತ್ರ ತರಬೇತಿಯನ್ನು ನಡೆಸಿಕೊಡಲಾಗುವುದು ಎಂದು ತಿಳಿಸಿದರು.
ಡಾ.ವಿಶ್ವನಾಥ ನಾಯಕ್ ಸ್ವಾಗತಿಸಿದರು. ವೇದಿಕೆಯಲ್ಲಿ ಸುಭೋದ್ ಜಿ ಪ್ರಭು, ಮುಖ್ಯೋಪಾಧ್ಯಾಯರಾದ ಭೋಜ ಪಿ. , ಶ್ವೇತಾ ಕಾಮತ್ , ಕಾರ್ಯಕ್ರಮ ಸಂಯೋಜಕರಾದ ಶುಭ ಬಂಜನ್ , ಸತ್ಯನಾರಾಯಣ ರಾವ್ ಉಪಸ್ಥಿತರಿದ್ದರು. ನ್ಯಾಯವಾದಿ ಶೈಲಜಾ ರಾಜೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.