ಸುಳ್ಯ – ಜನರಲ್ಲಿ ಭಾರಿ ಕುತೂಹಲ ಮೂಡಿಸಿದ ಅಸಿಯಾ ಮರು ವಿವಾಹ…

ಸುಳ್ಯ :ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸುಳ್ಯ ಕಟ್ಥೆಕಾರ್ಸ್ ಕುಟುಂಬದ ಖಲೀಲ್ ಎಂಬವನನ್ನು ಮದುವೆಯಾಗಿ ನಂತರ ಸುಳ್ಯ ಜನರಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ಅಸಿಯಾ,ಇದೀಗ ಕೇರಳ ಮೂಲದ ವ್ಯಕ್ತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾರೆ.
ಸುಳ್ಯದ ಖಲೀಲ್ ಎಂಬವರನ್ನು ಮದುವೆಯಾಗಿ ನಂತರ ಆತ ಅವಳನ್ನು ಮನೆಗೆ ಸೇರಿಸದೇ ಸುಳ್ಯದಲ್ಲಿ ಆಹೋರಾತ್ರಿ ಧರಣಿ ಕೂತಿದ್ದ ಅಸಿಯಾ ಪ್ರಕರಣ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು . ಹಲವಾರು ಸಂಘಟನೆಗಳು ಮಾತುಕತೆ ನಡೆಸಿ ಪ್ರಕರಣವನ್ನು ಮುಗಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ .
ಸುಳ್ಯದ ಖಲೀಲ್ ಮತ್ತು ನಾನು ಸ್ವಇಚ್ಛೆಯಂತೆ ವಿಚ್ಚೇದನ ಪಡೆಯುವುದಾಗಿಯೂ, ಮುಂದಕ್ಕೆ ತನಗೂ ಖಲೀಲ್ ಕಟ್ಟೆಕಾರ್ಸ್ ರಿಗೂ ಯಾವುದೇ ಸಂಭಂದವಿಲ್ಲವೆಂದೂ ಅಸಿಯಾ ಘೋಷಿಸಿದ್ದಾರೆ ಎನ್ನಲಾಗಿದೆ . ಇದೀಗ ಕೇರಳ ಮೂಲದ ಉದ್ಯಮಿ ಇಮ್ರಾನ್ ಎಂಬವರನ್ನು ಮದುವೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.