ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿ- ಅಶ್ವತ್ಥ ಕಟ್ಟೆ ನಿರ್ಮಾಣಕ್ಕೆ ಸ್ಥಳ ಗುರುತಿಸುವಿಕೆ…

ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿ, ಸಜೀಪಮುನ್ನೂರು ಇಲ್ಲಿ ನೇತ್ರಾವತಿ ನದಿ ತೀರದಲ್ಲಿ ನೂತನ ಅಶ್ವತ್ಥ ಕಟ್ಟೆ ವಾಸ್ತು ಪ್ರಕಾರ ನಿರ್ಮಿಸಲು ಆಯ- ಅಳತೆ ವಾಸ್ತು ಶಾಸ್ತ್ರಜ್ಞ ಮುನಿಯಂಗಳ ಪ್ರಸಾದ್ ಭಟ್ ಅವರು ಸನ್ನಿಧಾನದಲ್ಲಿ ಗುರುತಿಸಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಪೂoಜ, ಅರ್ಚಕ ಕೃಷ್ಣ ಭಟ್, ಸಮಿತಿ ಸದಸ್ಯರಾದ ಹರಿಪ್ರಸಾದ್ ಭಂಡಾರಿ, ದೇವಪ್ಪ ಮಡಿವಾಳ, ಎನ್ ಕೆ ಶಿವ, ಧನಂಜಯ ಶೆಟ್ಟಿ, ಎಂ ಶಂಕರನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

Related Articles