ವಿದ್ಯಾರ್ಥಿಗಳ ಸಾಧನೆಗೆ ಗುರಿ ಇರಲಿ- ಸುರೇಶ್ ಬಾಳಿಗ…

ಬಂಟ್ವಾಳ ಜೂ.30: ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಶಿಸ್ತು ಮತ್ತು ಪರಿಶ್ರಮದಿಂದ ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಬೇಕು. ಕನಸನ್ನು ನನಸು ಮಾಡಲು ಶಿಸ್ತಿನಿಂದ ಅಭ್ಯಾಸ ಮಾಡಿ ನಿರಂತರ ಶ್ರಮ ಪಡಬೇಕು ಎಂದು ಬಂಟ್ವಾಳ ಉದ್ಯಮಿ ಸುರೇಶ್ ಬಾಳಿಗ ಹೇಳಿದರು.
ಅವರು ಎಸ್.ವಿ.ಎಸ್ ದೇವಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ 2025-26ನೇ ಸಾಲಿನ ಶಾಲಾ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಸಮಿತಿಯ ಸದಸ್ಯರಾದ ಬಿ.ಶಿವಾನಂದ ಬಾಳಿಗ, ಬಿ. ಸುಬ್ರಾಯ ನಾಯಕ್ , ಪಿ. ಪ್ರಕಾಶ್ ಕಿಣಿ, ನ್ಯಾಯವಾದಿ ವೆಂಕಟ್ರಮಣ ಶೆಣೈ, ಭಾಮಿ ಲಕ್ಷ್ಮಣ ಶೆಣೈ, ಮುಖ್ಯೋಪಾಧ್ಯಾಯಿನಿ ರೋಶ್ನಿ ತಾರಾ ಡಿಸೋಜ ಉಪಸ್ಥಿತರಿದ್ದರು.
ಪ್ರಾಂಶುಪಾಲ ಎಮ್ ಗಂಗಾಧರ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಜವಾಬ್ದಾರಿ ಘೋಷಿಸಿದರು. ಕನ್ನಡ ಉಪನ್ಯಾಸಕ ಜಯಾನಂದ ಪೆರಾಜೆ ಶುಭ ಹಾರೈಸಿ ಮಾತನಾಡಿದರು. ಉಪನ್ಯಾಸಕರಾದ ವೆಂಕಟೇಶ ನಾಯಕ್ , ಮಂಜುನಾಥ ಶೆಣೈ ಸಹಕರಿಸಿದರು.
ಶಾಲಾ ನಾಯಕಿಯಾಗಿ ವೇದಿಕಾ ದೀಪಕ್ ಗಾರ್ಗಿ, ಕಾರ್ಯದರ್ಶಿಯಾಗಿ ತನುಶ್ರೀ ಡಿ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಅಹಮ್ಮದ್ ಸಾಹಿಲ್, ವಿದ್ಯಾಮಂತ್ರಿಯಾಗಿ ರಾಜರಾಜೇಶ್ವರಿ ಹೆಚ್ ಭಟ್, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಮಹಮ್ಮದ್ ಶಕೀರ್ , ಶಿಸ್ತು ಸಮಿತಿ ಕಾರ್ಯದರ್ಶಿಯಾಗಿ ಮೋಕ್ಷಿತಾ ಮೊದಲಾದವರು ಸಂಚಾಲಕರಿಂದ ಪ್ರಮಾಣವಚನ ಸ್ವೀಕರಿಸಿದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.