ಬುಧವಾರ – ದ.ಕ 149 ,ಉಡುಪಿ 170 ಕೊರೊನ ಪಾಸಿಟಿವ್ ಪತ್ತೆ…
ಮಂಗಳೂರು: ಇಂದು(ಬುಧವಾರ ) ದ.ಕ ಜಿಲ್ಲೆಯಲ್ಲಿ 149 ,ಉಡುಪಿ ಜಿಲ್ಲೆಯಲ್ಲಿ 170 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಇಂದು 149 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.3343 ಸಕ್ರಿಯ ಪ್ರಕರಣಗಳಿವೆ.82 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 10 ಮಂದಿ ಕೊರೊನದಿಂದಾಗಿ ಮೃತಪಟ್ಟಿದ್ದಾರೆ.ಮಂಗಳೂರು ತಾಲೂಕಿನಲ್ಲಿ 79 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬಂಟ್ವಾಳದಲ್ಲಿ 21, ಬೆಳ್ತಂಗಡಿಯಲ್ಲಿ 20, ಪುತ್ತೂರು 16, ಸುಳ್ಯ ತಾಲೂಕಿನಲ್ಲಿ 1 ಸೋಂಕು ಪತ್ತೆಯಾಗಿದೆ. ಹೊರ ಜಿಲ್ಲೆಯ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು 170 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5143 ಕ್ಕೆ ಏರಿಕೆಯಾಗಿದೆ.