ಮೂಡುಬಿದಿರೆ – ಮಿನಿ ಮಾಸ್ಟ್ ದೀಪದ ಉದ್ಘಾಟನೆ…

ಮೂಡುಬಿದಿರೆ:ಪುರಸಭಾ ವ್ಯಾಪ್ತಿಯ 21ನೇ ವಾರ್ಡಿನ ಕರಿಂಜೆ ದೇವಸ್ಥಾನದ ಬಳಿ ನೂತನವಾಗಿ ಪುರಸಭೆ ವತಿಯಿಂದ ನಿರ್ಮಿಸಿರುವ ಮಿನಿ ಮಾಸ್ಟ್ ದೀಪದ ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಯವರು ನೆರವವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಎಂ, ಪುರಸಭಾ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಶಶಿಕಿರಣ್, ವಾರ್ಡ್ ಸದಸ್ಯರಾದ ಶ್ರೀಮತಿ ಜಯಶ್ರೀ ಕೇಶವ್, ಸುರೇಶ್ ಕೋಟ್ಯಾನ್, ಊರಿನ ಪ್ರಮುಖರು ಉಪಸ್ಥಿತರಿದ್ದರು.
