ವ್ಯರ್ಥವಾಗದಿರಲಿ ಯೌವ್ವನ- ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವಾರ್ಷಿಕ ಮಹಾಸಭೆ – ನೂತನ ಸಮಿತಿ ಅಸ್ತಿತ್ವಕ್ಕೆ…
ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವಾರ್ಷಿಕ ಮಹಾ ಸಭೆ ಫೆ.12ರಂದು ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಖಾಫಿ ಅಧ್ಯಕ್ಷತೆಯಲ್ಲಿ ಬೆಳ್ಳಾರೆ ಸುನ್ನಿ ಸೆಂಟರ್ ನಲ್ಲಿ ಜರಗಿತು.
ಸುನ್ನಿ ಜಂಇಯ್ಯತುಲ್ ಉಲಮಾ ಬೆಳ್ಳಾರೆ ಝೋನ್ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ ಉದ್ಘಾಟಿಸಿದರು. ಎಸ್.ವೈ.ಎಸ್ ಬೆಳ್ಳಾರೆ ಸೆಂಟರ್ ಪ್ರ. ಕಾರ್ಯದರ್ಶಿ ಹನೀಫ್ ಹಾಜಿ ಇಂದ್ರಾಜೆ ಮುಖ್ಯ ಅತಿಥಿಯಾಗಿದ್ದರು.
ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪ್ರ. ಕಾರ್ಯದರ್ಶಿ ಸ್ವಬಾಹ್ ಹಿಮಮಿ ವರದಿ ಹಾಗೂ ಫಿನಾನ್ಸ್ ಕಾರ್ಯದರ್ಶಿ ಶಮೀರ್ ಡಿ.ಹೆಚ್ ಮೊಗರ್ಪಣೆ ಲೆಕ್ಕ ಪತ್ರ ಮಂಡಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ (ಈಸ್ಟ್) ಮುಹಮ್ಮದ್ ಮಿಸ್ಬಾಹಿ ಸಂಘಟನಾ ತರಬೇತಿ ನಡೆಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ (ಈಸ್ಟ್) ಪ್ರ. ಕಾರ್ಯದರ್ಶಿ ಶಫೀಖ್ ಮಾಸ್ಟರ್ ತಿಂಗಳಾಡಿ ವೀಕ್ಷಕರಾಗಿದ್ದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಫೈಝಲ್ ಝುಹ್ರಿ, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಪ್ರ. ಕಾರ್ಯದರ್ಶಿ ಜುನೈದ್ ಸಖಾಫಿ, ಜಿಲ್ಲಾ ನಿಕಟಪೂರ್ವ ಫಿನಾನ್ಸ್ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ, ಶಂಸುದ್ದೀನ್ ಝಂಝಂ, ನೌಶಾದ್ ಕೆರೆಮೂಲೆ ಮುಂತಾದ ನಾಯಕರು ಉಪಸ್ಥಿತರಿದ್ದರು.
ನೂತನ ಸಮಿತಿ : ಸ್ವಬಾಹ್ ಸಖಾಫಿ (ಅಧ್ಯಕ್ಷ) ಸ್ವಾದಿಖ್ ಮಾಸ್ಟರ್ (ಪ್ರ. ಕಾರ್ಯದರ್ಶಿ) ಸಿದ್ದೀಖ್ ಹಿಮಮಿ (ಫಿನಾನ್ಸ್ ಕಾರ್ಯದರ್ಶಿ) ಶಮೀರ್ ಡಿ.ಹೆಚ್ ಮೊಗರ್ಪಣೆ (ಕ್ಯೂ.ಡಿ ಕಾರ್ಯದರ್ಶಿ) ಶಾಕಿರ್ ಬೆಳ್ಳಾರೆ (ಕ್ಯಾಂಪಸ್ ಕಾರ್ಯದರ್ಶಿ) ರಿಯಾನ್ ಸಅದಿ (ದಅವಾ ಕಾರ್ಯದರ್ಶಿ) ನಿಯಾಝ್ ಎಲಿಮಲೆ (ಪಬ್ಲಿಕೇಷನ್ ಕಾರ್ಯದರ್ಶಿ) ಸಿದ್ದೀಖ್ ಎಲಿಮಲೆ (ರೈಂಬೋ ಕಾರ್ಯದರ್ಶಿ) ಖಲೀಲ್ ಇರುವಂಬಳ್ಳ (ವಿಸ್ಡಂ ಕಾರ್ಯದರ್ಶಿ) ಮಹ್ಶೂಕ್ ಇರುವಂಬಳ್ಳ (ಸಿ.ಸಿ ಕಾರ್ಯದರ್ಶಿ) ಕಬೀರ್ ಹಿಮಮಿ (ಮೀಡಿಯಾ ಕಾರ್ಯದರ್ಶಿ) ಹಾಗೂ ಶರೀಫ್ ಮೊಗರ್ಪಣೆ, ಶಮೀರ್ ಪಳ್ಳಿಮಜಲು, ನೌಶಾದ್ ಅಹ್ಸನಿ, ಮುಖ್ತಾರ್ ಹಿಮಮಿ, ಅಝೀಝ್ ಮಾಸ್ಟರ್, ಬಶೀರ್ ಕಲ್ಲುಮುಟ್ಲು (ಸದಸ್ಯರು)
ಖಲೀಲ್ ಝುಹ್ರಿ ಸ್ವಾಗತಿಸಿ, ಸ್ವಾದಿಖ್ ಮಾಸ್ಟರ್ ವಂದಿಸಿದರು.