ಮಂಗಳೂರಿನಲ್ಲಿ ಮೀಫ್ ಶೈಕ್ಷಣಿಕ ಸಮ್ಮೇಳನದ ವಿಚಾರಗೋಷ್ಠಿ – ಕೆ.ಎಂ. ಮುಸ್ತಫ ಭಾಗಿ…
ಸುಳ್ಯ: ದ. ಕ. ಮತ್ತು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ 20ನೇ ವಾರ್ಷಿಕ ದ ಅಂಗವಾಗಿ ಶೈಕ್ಷಣಿಕ ಸಮ್ಮೇಳನ ಮಂಗಳೂರಿನ ಪುರಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು.
ಶಿಕ್ಷಕರ ತರಬೇತಿ, ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ,ವಿಚಾರಗೋಷ್ಠಿ, ಆಧುನಿಕ ತಂತ್ರಜ್ಞಾನದ ಮೂಲಕ ಕಲಿಕಾ ವಿಧಾನ, ಗಣ್ಯರ ಸಮಾವೇಶ ಮೊದಲಾದ ಕಾರ್ಯಕ್ರಮಗಳು ಜರಗಿತು. ಯೇನೆಪೋಯ ವಿಶ್ವವಿದ್ಯಾಲಯದ ಕುಲಪತಿ ವೈ ಅಬ್ದುಲ್ಲ ಕುನ್ಜಿ ಕುoಞ ಮತ್ತು ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿ ವಿನಯ ಹೆಗ್ಡೆ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಶಿಕ್ಷಣ ಸಂಸ್ಥೆಗಳು ಮಾನ್ಯತೆ, ವೇತನ, ಇನ್ಸೂರೆನ್ಸ್, ಇ ಎಸ್ ಐ, ಭೂಮಿ ಒಡೆತನ, ಕನ್ವರ್ಷನ್ ಮೊದಲಾದ ವಿಷಯಗಳ ಸಮಸ್ಯೆಗಳು ಮತ್ತು ಪರಿಹಾರಗಳು, ಸವಾಲುಗಳು ಮತ್ತು ಅವಕಾಶ ಗಳು ಎಂಬ ವಿಚಾರ ಗೋಷ್ಠಿ ಯಲ್ಲಿ ಹೈಕೋರ್ಟ್ ಖ್ಯಾತ ನ್ಯಾಯವಾದಿ ಸುದರ್ಶನ್ ಸುರೇಶ, ರಾಜ್ಯ ಒಕ್ಕೂಟ ದ ಕಾರ್ಯದರ್ಶಿ ಪ್ರಭಾಕರ ಅರಸು ತುಮಕೂರು, ಮೀಫ್ ಉಪಾಧ್ಯಕ್ಷ ಕೆ. ಎಂ.ಮುಸ್ತಫ ಸುಳ್ಯ ವಿಷಯ ಮಂಡಿಸಿ ಚರ್ಚೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ, ಗೌರವಾಧ್ಯಕ್ಷ ಉಮ್ಮರ್ ಟಿ. ಕೆ, ವಿಧಾನ ಪರಿಷತ್ ಸದಸ್ಯರು ಸರ್ಕಾರಿ ಭರವಸೆ ಸಮಿತಿಯ ಅಧ್ಯಕ್ಷರಾದ ಬಿ .ಎಂ. ಫಾರೂಕ್, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾದ ಯು.ಟಿ. ಖಾದರ್, ಪ್ರಧಾನ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಮತ್ತು ಮತ್ತು ಉಡುಪಿ ಜಿಲ್ಲೆಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮೊದಲಾದವರು ಉಪಸ್ಥಿತರಿದ್ದರು.