ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಸಮಿತಿಯಿಂದ ಹೈದರಲಿ ಶಿಹಾಬ್ ತಂಙಳ್ ಅವಾರ್ಡ್…
ಸುಳ್ಯ: ಸಹಚಾರಿ ಫಂಡ್ ಸಂಗ್ರಹದಲ್ಲಿ ವಲಯ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಶಾಖೆಗಳಿಗೆ ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಸಮಿತಿಯಿಂದ ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ಅವಾರ್ಡ್ ನೀಡಿ ಗೌರವಿಸಲಾಯಿತು.
2022 ನೇ ಸಾಲಿನಲ್ಲಿ ಬೆಳ್ಳಾರೆ ಶಾಖೆ ಪ್ರಥಮ ಮತ್ತು ಸುಳ್ಯ ಟೌನ್ ಶಾಖೆ ದ್ವಿತೀಯ ಸ್ಥಾನ ಪಡಕೊಂಡಿತು.ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಅಧ್ಯಕ್ಷ ಅಬ್ದುಲ್ಲಾ ಫೈಝಿ ವಹಿಸಿದರು.ಕಾರ್ಯಕ್ರಮವನ್ನು ಅಬ್ದುಲ್ ಖಾದರ್ ಫೈಝಿ ಉದ್ಘಾಟಿಸಿದರು .ಮುಖ್ಯ ಅತಿಥಿಗಳಾಗಿ ಅಹ್ಮದ್ ನಹೀಮ್ ಫೈಝಿ,ಸುಳ್ಯ ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ,ಎಸ್ ಕೆ ಎಸ್ ಎಸ್ ಎಫ್ ದ.ಕ ಈಸ್ಟ್ ಜಿಲ್ಲಾ ಉಪಾಧ್ಯಕ್ಷ ಜಮಾಲ್ ಬೆಳ್ಳಾರೆ,ಸಹದ್ ಫೈಝಿ,ಮದರಸ ಮ್ಯಾನೇಜ್‌ಮೆಂಟ್ ಕೋಶಾಧಿಕಾರಿ ಹಾಜಿ ಎಸ್.ಎ.ಹಮೀದ್, ಮುಹಮ್ಮದ್ ಕುಂಞಿ ಮೇನಾಲ, ಸಿದ್ದೀಕ್ ಅಡ್ಕ, ಸಿದ್ದೀಕ್ ಬೋವಿಕ್ಕಾನ, ಮುಹಮ್ಮದ್ ಬಿ.ಎ ಮೇನಾಲ, ನವಾಜ್ ಸುಪ್ರೀಂ, ಆಬಿದ್ ಬೆಳ್ಳಾರೆ, ಜುಬೈರ್ ಅರಂತೋಡ್, ಆಶಿಕ್ ಅರಂತೋಡ್ ಉಪಸ್ಥಿತರಿದ್ದರು.
ವಲಯ ಪ್ರ.ಕಾರ್ಯದರ್ಶಿ ಆಶಿಕ್ ಸುಳ್ಯ ಸ್ವಾಗತಿಸಿ ವಂದಿಸಿದರು.