ಸೌಹಾರ್ದ ಸಮ್ಮೇಳನ ಯಶಸ್ವಿಗೊಳಿಸಿ – ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಕರೆ…
ಸುಳ್ಯ: ಮೇ 26 ಗುರುವಾರದಂದು ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯುವ ಸೌಹಾರ್ದ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಸಮಿತಿ ವತಿಯಿಂದ ಮನವಿ ಮಾಡಲಾಗಿದೆ.
ಸುಳ್ಯದಲ್ಲಿ ಮೇ.23ರಂದು ನಡೆದ ಸೌಹಾರ್ದ ಪ್ರಚಾರ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಎಸ್ ಕೆ ಎಸ್ ಎಸ್ ಎಫ್ ವಲಯ ಅಧ್ಯಕ್ಷ ರಾದ ಅಬ್ದುಲ್ಲಾ ಫೈಝಿ ವಹಿಸಿದ್ದರು. ಅಬ್ದುಲ್ ಖಾದರ್ ಫೈಝಿ ದುವಾ ನೆರವೇರಿಸಿ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಅಹ್ಮದ್ ನಹೀಮ್ ಫೈಝಿ,ಸುಳ್ಯ ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ,ಎಸ್ ಕೆ ಎಸ್ ಎಸ್ ಎಫ್ ದ.ಕ ಈಸ್ಟ್ ಜಿಲ್ಲಾ ಉಪಾಧ್ಯಕ್ಷ ಜಮಾಲ್ ಬೆಳ್ಳಾರೆ,ಸಹದ್ ಫೈಝಿ ಮಾತನಾಡಿದರು.
ಪ್ರಸ್ತುತ ಸೌಹಾರ್ದ ಸಮ್ಮೇಳನದಲ್ಲಿ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ , ಡಾ. ಶ್ರೀ ಜಯ ಬಸವಾನಂದ ಸ್ವಾಮೀಜಿ ಚಿಕ್ಕಮಂಗಳೂರು, ಸಸಿಕಾಂತ್ ಸೆಂಥಿಲ್, ಪ್ರಿಯಾಂಕ ಖರ್ಗೆ ಮುಂತಾದ ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮದ್ರಸಾ ಮೆನೇಜ್ಮೆಂಟ್ ಕೋಶಾಧಿಕಾರಿ ಹಾಜಿ ಎಸ್.ಎ ಹಮೀದ್, ಎಸ್.ಎಂ.ಎಫ್ ಅಧ್ಯಕ್ಷ ಇಬ್ರಾಹಿಂ ಹಾಜಿ ಮಂಡೆಕೋಲ್, ಹಾಜಿ ಉಮರ್ ಕಟ್ಟೆಕಾರ್, ಅಹ್ಮದ್ ಹಾಜಿ ಸುಪ್ರೀಂ, ಅಹ್ಮದ್ ಹಾಜಿ ಪಾರೆ, ಅಬ್ದುಲ್ ಅಜೀಜ್, ಯೂಸುಫ್ ಸಂಟ್ಯಾರ್, ಅಬೂಬಕ್ಕರ್ ಬನ್ನೂರ್, ಹಾರಿಸ್ ಮಕ್ದೂಮಿ, ಸಂಶುದ್ದೀನ್ ಇರ್ಫಾನಿ, ಬಶೀರ್ ಮೌಲಾವಿ ಹಾಗೂ ವಿವಿಧ ಶಾಖೆಗಳ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವಲಯ ಪ್ರ.ಕಾರ್ಯದರ್ಶಿ ಆಶಿಕ್ ಸುಳ್ಯ ಸ್ವಾಗತಿಸಿ ವಂದಿಸಿದರು.