ಸುದ್ದಿ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಪ್ರೊ.ಹರಿವಿನೋದ್ ಅವರಿಗೆ ಡಾಕ್ಟರೇಟ್ ಪದವಿ…

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ.ಹರಿವಿನೋದ್.ಎನ್ ಅತ್ಯುನ್ನತ ಪದವಿಯಾದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಎಫೀಶಿಯೆಂಟ್ ಅಲ್ಗಾರಿದಮ್ಸ್ ಫಾರ್ ಐಡೆಂಟಿಟಿ ಎಶ್ಯೂರೆನ್ಸ್ ಯೂಸಿಂಗ್ ಮಲ್ಟಿ-ಬಯೋಮೆಟ್ರಿಕ್ (Efficient algorithms for identity assurance using Multi-biometric) ಎನ್ನುವ ವಿಷಯದ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ.ಬಿ.ಎಚ್.ಶೇಖರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಮಾಡಿದ್ದಾರೆ. ಇವರು ಕಾಸರಗೋಡು ಮಂಜೇಶ್ವರ ತಾಲೂಕಿನ ವಾಣೀನಗರದ ಲಕ್ಷ್ಮೀಶ ಕಡಂಬಳಿತ್ತಾಯ ಹಾಗೂ ಶ್ರೀಮತಿ ಸತ್ಯವತಿ ದಂಪತಿಗಳ ಪುತ್ರ. ಇವರು ಪ್ರಸ್ತುತ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.
ಡಾ.ಹರಿವಿನೋದ್.ಎನ್ ಅವರ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅವರನ್ನು ಅಭಿನಂದಿಸಿದ್ದಾರೆ.

Advertisement

Related Articles

Leave a Reply

Your email address will not be published. Required fields are marked *

Back to top button