ಶ್ರೀ ಸುಬ್ರಮಣ್ಯ ದೇವಸ್ಥಾನ ಮುಗುಳಿ – ಸ್ಕಂದ ಪಂಚಮಿ ಆಚರಣೆ…

ಬಂಟ್ವಾಳ: ಶ್ರೀ ಸುಬ್ರಮಣ್ಯ ದೇವಸ್ಥಾನ ಮುಗುಳಿ, ಸಜೀಪಮುನ್ನೂರು ಇಲ್ಲಿ ವರ್ಷಂಪ್ರತಿಯಂತೆ ಸ್ಕಂದ ಪಂಚಮಿಯ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ದೇವರಿಗೆ ಫಲಪಂಚಾಮೃತ ಪವಮಾನ ಸೂಕ್ತ ಅಭಿಷೇಕ, ಕಾರ್ತಿಕ ಪೂಜೆ, ಪುಣ್ಯಹ ಗಣಹೋಮ ಶ್ರೀ ವನ ಶಾಸ್ತಾರ, ಶ್ರೀ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ, ನಾಗತಂಬಿಲ, ಅನ್ನದಾನ ಶ್ರದ್ಧಾಭಕ್ತಿಯಿಂದ ನೆರವೇರಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಕೃಷ್ಣ ಭಟ್, ಎನ್ ಕೆ ಶಿವ, ಹರಿ ಪ್ರಸಾದ್ ಭಂಡಾರಿ, ದೇವಪ್ಪ ಮಡಿವಾಳ, ರಾಜು ಪೂಜಾರಿ, ಶ್ರೀನಿವಾಸ ನಾಯಕ್, ಚಿತ್ರ ಎಸ್ ರೈ, ಚಿತ್ರ ವಿ ಮೊದಲಾದವರು ಉಪಸ್ಥಿತರಿದ್ದರು.
ಸಜಿಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

Related Articles