ಮನೆಗೆ ಬೆಂಕಿ ತಗಲಿದ ಕುಟುಂಬಕ್ಕೆ ಸೊಸೈಟಿ ಯಿಂದ ಪರಿಹಾರ ಧನ…

ಬಂಟ್ವಾಳ,ನ.23 : ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಾವೂರು ಶಾಖೆಗೆ ಒಳ ಪಟ್ಟಂತೆ ನಾವೂರು ಗ್ರಾಮದ ಕಲಮೆ ನಿವಾಸಿಯಾಗಿರುವ ದಿನೇಶ್ ಎಂಬವರ ಮನೆಗೆ ವಿದ್ಯುತ್ ಸ್ಪರ್ಶ ಉಂಟಾಗಿ ಬೆಂಕಿ ತಗಲಿ ಮನೆಗೆ ಸಹಸ್ರಾರು ರುಪಾಯಿಗಳ ನಷ್ಟ ಉಂಟಾಗಿತ್ತು. ಅವರ ಸಂಕಷ್ಟಕ್ಕೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಬಂಟ್ವಾಳ ವ್ಯವಸಾಯ ಸೇವಾ ಸಹಕಾರ ಸಂಘವು ಕುಟುಂಬದ ನೆರವಿಗೆ ಬಂದಿದ್ದು ದುರಸ್ತಿಗಾಗಿ ರೂ.10,000 ನೀಡಿ ಸಹಕರಿಸಿದರು.
ಈ‌ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ,ಉಪಾಧ್ಯಕ್ಷ ಆದಿರಾಜ ಕೆ. ಜೈನ್,ಸದಸ್ಯ ವಿಠಲ್, ಕೋಟ್ಯಾನ್ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಕಾಮತ್,ನಾವೂರು ಶಾಖಾಧಿಕಾರಿ ದಿನೇಶ್ ಇದ್ದರು.

Related Articles

Back to top button