ಸಂಪಾಜೆ ಗ್ರಾಮ ಪಂಚಾಯತ್ ಗೆ ಜಿಲ್ಲಾಧಿಕಾರಿಗಳ ಭೇಟಿಗೆ ಆಹ್ವಾನ…
ಸುಳ್ಯ: ಸುಳ್ಯ ತಾಲೂಕು ಸಂಪಾಜೆ ಗ್ರಾಮದ ವಿವಿಧ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸಲು ದ ಕ ಜಿಲ್ಲಾಧಿಕಾರಿ ಡಾ। ರಾಜೇಂದ್ರ ರವರನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ರವರ ನೇತೃತ್ವದ ನಿಯೋಗ ಆಹ್ವಾನಿಸಿದರು.
ನಿಯೋಗದಲ್ಲಿ ತೆಕ್ಕಿಲ್ ಗ್ರಾಮಿಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್, ಅರಂತೋಡು ತಾಲೂಕು ಪಂಚಾಯತ್ ಕ್ಷೇತ್ರದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ರಹೀಮ್ ಬೀಜದಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.