ಸ್ವಚ್ಛತೆ ಮತ್ತು ಆರೋಗ್ಯ ಸೇವಾ ಕಾರ್ಯಗಳಿಗೆ ಮಹತ್ವ : ಕಯ್ಯೂರು ನಾರಾಯಣ ಭಟ್…
ಪುತ್ತೂರು : ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್ ಇದರ ಕೇಂದ್ರ ಸಮಿತಿಯ ಸಭೆಯನ್ನು ಪುತ್ತೂರು ಬೊಳುವಾರು ಬೈಲಿನ ಸೌಭರಿ ನಿವಾಸದಲ್ಲಿ ಸದಾನಂದ ರಾವ್ ಮತ್ತು ವನಿತಾ ಎಸ್ ರಾವ್ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಅನಾರೋಗ್ಯದ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ನಾನಾ ಸೌಲಭ್ಯಗಳಿದ್ದರೂ ಅದನ್ನು ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳು, ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಟ, ರೋಗಿಯ ಜೀವ ಉಳಿಸಲು ಕುಟುಂಬದ ಸದಸ್ಯರು ಎದುರಿಸುವ ಸಮಸ್ಯೆಗಳನ್ನು ನೋಡಿದಾಗ ಹಿರಿಯರ ಸೇವಾ ಪ್ರತಿಷ್ಠಾನದಿಂದ ಅರ್ಹರಿಗೆ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡುವ ಯೋಜನೆಯ ಅಗತ್ಯವಿದೆ.
ಪರಿಸರ ಜಾಗೃತಿ ಮತ್ತು ಪ್ಲಾಸ್ಟಿಕ್ ಮುಕ್ತ ಜೀವನ ವಿಧಾನ ಅಳವಡಿಸಿಕೊಳ್ಳುವ ಬಗ್ಗೆಯೂ ಮಠಗಳು, ದೇವಸ್ಥಾನ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸಲಾಗುವುದೆಂದು ಅಧ್ಯಕ್ಷತೆ ವಹಿಸಿದ್ದ ಅ. ಕ. ಹಿ. ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ತಿಳಿಸಿದರು.
ಸದಸ್ಯರ ಅಭಿಪ್ರಾಯದ ಬಳಿಕ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಜಯರಾಮ ಪೂಜಾರಿ ನರಿಕೊಂಬು,ಚಂಚಲಾಕ್ಷಿ ಪುತ್ತೂರು ಮತ್ತು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ವೇದವ್ಯಾಸ ರಾಮಕುಂಜ ಈ ಬಗ್ಗೆ ಸಂಬಂಧಿತ ಇಲಾಖೆಗಳಿಗೂ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಕ್ರಿಯಾಯೋಜನೆಯನ್ನು ರೂಪಿಸುವಂತೆ ತಿಳಿಸಲಾಯಿತು.
ನಾಲ್ಕನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಡಿಸೆಂಬರ್ 20ರಂದು ಪಾವಂಜೆ ಶ್ರೀ ಜ್ಞಾನಶಕ್ತಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾಗವೃಜ ಕ್ಷೇತ್ರದಲ್ಲಿ ಜರಗಲಿರುವ ಪ್ರತಿಷ್ಠಾನದ ನಾಲ್ಕನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ವಾರ್ಷಿಕೋತ್ಸವದಲ್ಲಿ ಪ್ರತೀ ತಾಲೂಕು ಘಟಕಗಳಿಂದ ಸೇವಾ ಕಾರ್ಯಕ್ರಮದ ಹಸ್ತಾಂತರದ ಬಗ್ಗೆ ವ್ಯವಸ್ಥೆ ಮಾಡಿ ಸಹಕರಿಸಬೇಕೆಂದು ಅಧ್ಯಕ್ಷರು ವಿನಂತಿಸಿದರು.
ಪ್ರತಿಷ್ಠಾನದ ವತಿಯಿಂದ ಒಂದು ದಿನದ ಸ್ಥಳೀಯ ಕ್ಷೇತ್ರ ಮತ್ತು ಕಾಶಿ ಮತ್ತು ಅಯೋಧ್ಯಕ್ಷೇತ್ರಗಳಿಗೆ ಸಂದರ್ಶನ ಕಾರ್ಯಕ್ರಮ ವಿವರಿಸಿಕೊಳ್ಳುವುದಾಗಿ ತಿಳಿಸಿ ಸದಸ್ಯರು ಈ ಬಗ್ಗೆ ಅಧ್ಯಕ್ಷರು ಅಥವಾ ಸಂಚಾಲಕರನ್ನು ಸಂಪರ್ಕಿಸಬೇಕೆಂದು ತಿಳಿಸಲಾಯಿತು.
ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಖಜಾಂಜಿ ಕೃಷ್ಣಶರ್ಮ ಅನಾರು, ಸಹ ಸಂಚಾಲಕ ವೇದವ್ಯಾಸ ರಾಮಕುಂಜ, ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ, ಗುಂಡ್ಯಡ್ಕ ಈಶ್ವರ ಭಟ್, ಉದಯಶಂಕರ ರೈ ಪುಣಚ, ಭವಾನಿ ಶಂಕರ ಶೆಟ್ಟಿ ಪುತ್ತೂರು, ಪದ್ಮನಾಭ ನಾಯಕ್ ಪುತ್ತೂರು, ಚಂಚಲಾಕ್ಷಿ, ಉದಯಕುಮಾರ್ ಭಟ್, ಪುಟ್ಟ ನಾಯ್ಕ್. ಯು, ಬಾಲಕೃಷ್ಣರಾವ್ ಪುತ್ತೂರು, ಲೀಲಾವತಿ ರಾವ್ ಉಪಸ್ಥಿತರಿದ್ದರು.
ಟ್ರಸ್ಟಿ ಜಯರಾಮ ಪೂಜಾರಿ ಪ್ರಾರ್ಥಿಸಿ ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿದರು. ಉಪಾಧ್ಯಕ್ಷರಾದ ದುಗ್ಗಪ್ಪ.ಎನ್ ಕಾರ್ಯಕ್ರಮ ನಿರೂಪಿಸಿ ಲೋಕೇಶ್ ಹೆಗ್ಡೆ ಪುತ್ತೂರು ವಂದಿಸಿದರು.




