ತೊಕ್ಕೊಟ್ಟು ಭೀಕರ ರಸ್ತೆ ಅಪಘಾತ- ಯುವ ದಂಪತಿ ದಾರುಣ ಸಾವು…

ಮಂಗಳೂರು : ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಇಂದು ಸಂಜೆ ಸಂಭವಿಸಿದೆ.

ದಂಪತಿ ತೆರಳುತ್ತಿದ್ದ ಬೈಕ್ ಮೇಲೆ ಭಾರಿ ಗಾತ್ರದ ಟ್ರಕ್ ಹರಿದ ಪರಿಣಾಮ ಈ ಭೀಕರ ದುರ್ಘಟನೆ ನಡೆದಿದೆ.ಬೈಕ್ ನಲ್ಲಿದ್ದ ಪ್ರಿಯಾ ಪೆರ್ನಾಂಡಿಸ್ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಬೈಕ್ ಸವಾರ ಪತಿ ರಾಯನ್ ಫೆರ್ನಾಂಡಿಸ್ ಅವರು ಆಸ್ಪತ್ರೆ ದಾರಿಯಲ್ಲಿ ಸಾವನ್ನಪ್ಪಿದ್ದಾರೆ.

ದಂಪತಿ ಇದ್ದ ಬೈಕ್ ಉಳ್ಳಾಲ ಕಡೆಗೆ ತಿರುಗುವ ಸಂದರ್ಭ ಅತಿ ವೇಗವಾಗಿ ತೊಕ್ಕೊಟ್ಟು ಫ್ಲೈಓವರ್ ಮೂಲಕ ಬಂದ ಲಾರಿ ಢಿಕ್ಕಿ ಹೊಡೆದು, ಇಬ್ಬರ ಮೇಲೂ ಚಲಿಸಿ ಕೆಲ ಮೀ. ದೂರಕ್ಕೆ ಎಳೆದುಕೊಂಡು ಹೋಗಿ ನಿಂತಿದೆ ಎನ್ನಲಾಗಿದೆ. ಘಟನೆಯಿಂದ ಪ್ರಿಯಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ರಯಾನ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ.
ಮಂಗಳೂರು ಬಜಾಲ್ ಮೂಲದ ರಾಯನ್ ಫೆರ್ನಾಂಡಿಸ್ ಅವರು ಕಳೆದ ಹತ್ತು ದಿನಗಳಿಂದ ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಾಯನ್ ಹಾಗೂ ಪ್ರಿಯಾ ದಂಪತಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಉದ್ಯೋಗಿಗಳು.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

FB IMG 1603816537560 Scaled E1603817387104 260x300

Wp 16038148529032923685903778338638 768x523 1 300x204

FB IMG 1603816583764 225x300

20201027 214016 Resize 95 300x192

Related Articles

Leave a Reply

Your email address will not be published. Required fields are marked *