ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ 2019 ….
ಮಂಗಳೂರು: ವಿಜ್ಞಾನದ ಕಡೆಗೆ ಯುವ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್- 2019 ಕಾರ್ಯಕ್ರಮ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ನಲ್ಲಿ ನ. 16 ಮತ್ತು 17 ರಂದು ರಂದು ಆಯೋಜಿಸಲಾಯಿತು.
ಸಮುದಾಯ ಆಧಾರಿತ ವಿವಿಧ ಸಮಸ್ಯೆಗಳ ಮತ್ತು ವಿನ್ಯಾಸ ಚಿಂತನೆಯ ಕುರಿತು 200 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳ ಮೂಲಕ 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ 350 ಕ್ಕೂ ಹೆಚ್ಚು ವಿಜ್ಞಾನದ ಮಾದರಿಗಳ ಪ್ರದರ್ಶನ- ಸ್ಪರ್ಧೆ ನಡೆಸಿ, ಅದರಲ್ಲಿ 40 ಉತ್ಪನ್ನಗಳು ಸ್ಟಾರ್ಟ್ ಆಪ್ ಗಳಾಗಿ ಪರಿವರ್ತಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
“ಬಿ ವಿಥ್ ಎಂಜಿನಿಯರಿಂಗ್”
ಗ್ರ್ಯಾಂಡ್ ಫಿನಾಲೆಗೆ ಮೊದಲು “ಬಿ ವಿಥ್ ಎಂಜಿನಿಯರಿಂಗ್”, ಎಂಬ 2 ದಿನಗಳ ತಯಾರಕರ ಕಾರ್ಯಕ್ರಮ ಇದು ನ.14 ಮತ್ತು ನ.15 ರಂದು ನಡೆಯಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವ ಸಮಾನ ಮನಸ್ಕ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ಎಂಜಿನಿಯರಿಂಗ್ ನ ನಿಜವಾದ ಮನೋಭಾವ ಏನು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಒಳ ನೋಟವನ್ನು ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ವಿವಿಧ ಕ್ಷೇತ್ರಗಳ ಪರಿಣಿತರಿಂದ ಹಲವಾರು ಸಂವಾದ ಕಾರ್ಯಕ್ರಮಗಳೂ ನಡೆದವು.
ನ.16 ರಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ವಹಿಸಿದ್ದರು. ಪ್ರಶಾಂತ್ ಪ್ರಕಾಶ್, ರಿಲಯನ್ಸ್ ಜಿಯೋ ಇನ್ಫೋಕಾಮ್ ನ ಮಾಜಿ ಹಿರಿಯ ಉಪಾಧ್ಯಕ್ಷರಾದ ಅನಂತ್ ರವಿ, ಉದಯ್ ಬಿರ್ಜೆ, ಎಸ್. ಶ್ರೀಧರ್, ಚೇತನ್ ವೇಣುಗೋಪಾಲ್, ಮದನ್ ಪಡಕಿ, ಸುಬ್ರಮಣಿಯನ್ ಶಿವಕುಮಾರ್, ಭಂಡಾರಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮಂಜುನಾಥ ಭಂಡಾರಿ, ಪ್ರಾಂಶುಪಾಲ ಡಾ. ಆರ್. ಶ್ರೀನವಾಸ ರಾವ್ ಕುಂಟೆ ಮತ್ತು NINE ಇನ್ಕ್ಯುಬೇಷನ್ ಸೆಂಟರ್ ನ ವ್ಯವಸ್ಥಾಪಕ ಅಶ್ವಿನ್ ಶೆಟ್ಟಿ ಉಪಸ್ಥಿತರಿದ್ದರು.