ನ0ದಾವರ ಚಿಕ್ಕಮೇಳ ಮನೆಮನೆ ಯಕ್ಷಗಾನ 2025ನೇ ಸಾಲಿನ ತಿರುಗಾಟ ಸಂಪನ್ನ…

ಬಂಟ್ವಾಳ: ನ0ದಾವರ ಚಿಕ್ಕ ಮೇಳದ 2025 ನೇ ಸಾಲಿನ ಮಳೆಗಾಲದ ಮನೆ ಮನೆಗೆ ಯಕ್ಷಗಾನ ಇದರ ಸಮಾರೋಪ ನ0ದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನದಲ್ಲಿ ಮಂಗಳವಾರದಂದು ಶ್ರೀ ದೇವರ ಸೇವೆಯಾಟದೊಂದಿಗೆ ಸಂಪನ್ನಗೊಂಡಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ದೇವಾಲಯದ ಪ್ರಧಾನ ಅರ್ಚಕ ಮಹೇಶ್ ಕುಮಾರ್ ಭಟ್, ಚಿಕ್ಕಮೇಳದ ಸಂಚಾಲಕ ಭಾಸ್ಕರ್ ಪೂಜಾರಿ ಸರಪಾಡಿ ಹಾಗೂ ಕಲಾವಿದರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮನೆಮನೆ ಯಕ್ಷಗಾನದಿಂದ ಸಂಗ್ರಹವಾದ ರೂ. 28885 ನಗದನ್ನು ಶ್ರೀ ದೇವಳಕ್ಕೆ ಹಸ್ತಾಂತರ ಮಾಡಲಾಯಿತು.

Related Articles

Back to top button