ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವ ಕೋಟ ಗುಣಮುಖವಾಗಲು ಬಾಲಗಣಪತಿ ಹವನ…

ಬಂಟ್ವಾಳ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೊರೋನಾದಿಂದ ಗುಣಮುಖವಾಗಲು ಸಜಿಪಮೂಡ ಗ್ರಾಮದ ಆನ್ನಪ್ಪಾಡಿ ಶ್ರೀ ಬಾಲಗಣಪತಿ ದೇವಸ್ಥಾನದಲ್ಲಿ ಇಂದು ಬಾಲಗಣಪತಿ ಹವನ ವಿದ್ಯುಕ್ತವಾಗಿ ಸಜಿಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.
ಪ್ರಮುಖರಾದ ಯಶವಂತ ದೇರಾಜೆ, ಮುಳ್ಳುoಜ ವೆಂಕಟೇಶ್ವರ ಭಟ್,.ಶ್ರೀಕಾಂತ್ ಶೆಟ್ಟಿ ಸಂಕೇಶ, ಕೆ ಸದಾನಂದ ಶೆಟ್ಟಿ, ಪ್ರೇಮ ಜಿ ಶೆಟ್ಟಿ, ಲಿಂಗಪ್ಪ ದೋಟ, ಸುರೇಶ್ ಪೂಜಾರಿ, ಸುರೇಶ್ ಆರ್ಯಪು, ಚಂದ್ರಶೇಖರ್, ನರೇಂದ್ರ ಆಳ್ವ, ರಮೇಶ್ ಅನ್ನಪ್ಪ ಡಿ, ದೇವದಾಸ್, ನಿತಿನ್ ಅರಸ ಮೊದಲಾದವರು ಉಪಸ್ಥಿತರಿದ್ದರು.