ಕಣ್ಣೂರಿನ ನೂತನ ಮೇಯರ್ ಟಿ.ಒ.ಮೋಹನ್ ರವರಿಗೆ ಟಿ.ಎಂ.ಶಾಹೀದ್ ತೆಕ್ಕಿಲ್ ಅವರಿಂದ ಸನ್ಮಾನ…

ಸುಳ್ಯ: ಕಣ್ಣೂರು ಕಾರ್ಪೊರೇಶನ್ ಗೆ 5 ವರ್ಷ ಅವಧಿಗೆ ನೂತನ ಮೇಯರ್ ಆಗಿ ಆಯ್ಕೆಯಾದ ಟಿ.ಒ. ಮೋಹನ್ ರವರನ್ನು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ. ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಸನ್ಮಾನಿಸಿದರು.
ಟಿ.ಎಂ.ಶಾಹೀದ್ ತೆಕ್ಕಿಲ್ ಅವರ ಬಾಲ್ಯ ಸ್ನೇಹಿತರಾಗಿರುವ ಟಿ.ಒ. ಮೋಹನ್ ಅವರು ಕಳೆದ 32 ವರ್ಷ ಗಳಿಂದ NSUI , ಯೂತ್ ಕಾಂಗ್ರೆಸ್ , ಕೆ.ಪಿ.ಸಿ.ಸಿ.ಯ ವಿವಿಧ ಹಂತದಲ್ಲಿ ಶಾಹೀದ್ ಅವರ ಸಹಪಾಠಿಯಾಗಿದ್ದರು. ಕೇರಳ ರಾಜ್ಯ ಯೂತ್ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿದ್ದ ಟಿ.ಒ. ಮೋಹನ್ ಅವರು ಇದೀಗ ಕಣ್ಣೂರು ಕಾರ್ಪೊರೇಶನ್ ನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ನಿಟ್ಟಿನಲ್ಲಿ ಟಿ.ಒ. ಮೋಹನ್ ರವರನ್ನು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ. ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಅವರ ಕಛೇರಿಯಲ್ಲಿ ಭೇಟಿ ಮಾಡಿ ಸನ್ಮಾನಿಸಿ, ಶುಭ ಹಾರೈಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button