ಸುಳ್ಯ – ಟೆರೇಸ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಉದ್ಯಮಿ ಸಂತೋಷ್ ಮಡ್ತಿಲ ನಿಧನ…

ಸುಳ್ಯ: ದೇವಚಳ್ಳ ಗ್ರಾಮದ ದೇವದಲ್ಲಿ ಮನೆಯೊಂದರಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದ ಸುಳ್ಯದ ಉದ್ಯಮಿ ಸಂತೋಷ್ ಮಡ್ತಿಲರವರು ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಇಂದು ಸಂಜೆ ಸಂತೋಷ್ ಮಡ್ತಿಲ ಅವರು ದೇವಚಳ್ಳ ಗ್ರಾಮದ ದೇವ ಎಂಬಲ್ಲಿ ಮನೆ ನೋಡಲು ತೆರಳಿದ್ದ ವೇಳೆ ಟೆರೆಸ್ ಮೇಲಿನಿಂದ ಬಿದ್ದು ಗಂಭಿರ ಗಾಯಗೊಂಡಿದ್ದರು. ಕೂಡಲೇ ಅವರಿಗೆ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರಿನ ಪಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ನಗರ ಗೌಡ ಸಂಘದಲ್ಲಿ ಸಕ್ರಿಯರಾಗಿದ್ದ ಅವರು ಕಾವೇರಿ ಮೋಟಾರ್ ಡ್ರೈವಿಂಗ್ ಸ್ಕೂಲ್ ನ ಮಾಲಕರಾಗಿದ್ದರು.
ಮೃತರು ಪತ್ನಿ ಮಧು ಸಂತೋಷ್, ಓರ್ವ ಪುತ್ರಿ, ಹಾಗೂ ಓರ್ವ ಪುತ್ರನನ್ನು, ಕುಟುಂಬಸ್ಥರನ್ನು ಹಾಗೂ ಅಪಾರ ಸ್ನೇಹಿತರನ್ನು ಅಗಲಿದ್ದಾರೆ.

91804a78 82ca 4be5 8d1e D36328842431 300x300

Related Articles

Leave a Reply

Your email address will not be published. Required fields are marked *