ಬಂಟ್ವಾಳ- ಸಾರ್ವಜನಿಕ ಪಾಲೆಕೆತ್ತೆ ಕಷಾಯ ವಿತರಣೆ…
ಬಂಟ್ವಾಳ: ತುಳುನಾಡಿನ ಸಂಪ್ರದಾಯದ ಆಚರಣೆಯಲ್ಲಿ ಆರೋಗ್ಯ ಭಾಗ್ಯವೂ ಇದೆ ಎಂದು ತುಳುಕೂಟ ಬಂಟ್ವಾಳದ ಅದ್ಯಕ್ಷ ಸುದರ್ಶನ್ ಜೈನ್ ಹೇಳಿದರು.
ಅವರು ತುಳುಕೂಟ ಬಂಟ್ವಾಳದ ಆಶ್ರಯದಲ್ಲಿ ಮತ್ತು ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ.ರೋಡ್ ಇದರ ಆಡಳಿತ ಮಂಡಳಿಯ ಸಹಕಾರದಲ್ಲಿ ನಡೆದ ಆಟಿ ಅಮವಾಸ್ಯೆಯ ಸಾರ್ವಜನಿಕ ಪಾಲೆಕೆತ್ತೆ ಕಷಾಯ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸಾರ್ವಜನಿಕರಿಗೆ ಕಷಾಯ ನೀಡಿ ಆಟಿ ಅಮಾವಾಸ್ಯೆಯ ಶುಭಾಶಯ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಎನ್. ಶಿವಶಂಕರ್, ಮಾಜಿ ಅಧ್ಯಕ್ಷ ರಾಜೇಶ್ಎಲ್.ನಾಯಕ್, ತುಳುಕೂಟದ ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಹಿರಿಯರಾದ ಕಾಂತಾಡಿ ಸೀತಾರಾಮ ಶೆಟ್ಟಿ, ಪರಮೇಶ್ವರ ಮೂಲ್ಯ, ನಾರಾಯಣ ಸಿ. ಪೆರ್ಣೆ, ಸದಾಶಿವ ಪುತ್ರನ್, ಟಿ. ಸೇಷಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ್, ದಾಮೋದರ ಏರ್ಯ, ನಿತೇಶ್ ಕುಲಾಲ್ ಪಲ್ಲಿಕಂಡ, ಪ್ರಕಾಶ್ ಶೆಟ್ಟಿ ಶ್ರೀ ಶೈಲ,ಸತೀಶ್ ಕುಮಾರ್ ಎಂ, ಹರೀಶ್ ಬಿ.ಸಿ.ರೋಡ್, ಸ್ವಜೇಶ್ ಜೈನ್ಉಪಸ್ಥಿತರಿದ್ದರು. ತುಳುಕೂಟದ ಕಾರ್ಯದರ್ಶಿ ಎಚ್ಕೆ ನಯನಾಡು ಸ್ವಾಗತಿಸಿದರು.