ಸುದ್ದಿ

ಅಯೋಧ್ಯೆ-ಬಾಬರಿ ಮಸೀದಿ ಪ್ರಕರಣದ ತೀರ್ಪು- ಮುಖ್ಯಾಂಶಗಳು…..

ನವದೆಹಲಿ : ಅಯೋಧ್ಯೆ ರಾಮಮಂದಿರ, ಬಾಬರಿ ಮಸೀದಿ ಭೂ ವಿವಾದಕ್ಕೆ ಸುಪ್ರೀಂ ಕೋರ್ಟ್‌ ಇಂದು ತೆರೆ ಎಳೆದಿದೆ. 2.77 ಎಕರೆ ವಿವಾದಿತ ಜಮೀನಿನ ಬಗ್ಗೆ ಸುಪ್ರೀಂ ಕೋರ್ಟ್‌ ಪಂಚ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಸ್ಪಷ್ಟ ತೀರ್ಪು ನೀಡಿದೆ.
ತೀರ್ಪಿನ ಮುಖ್ಯಾಂಶಗಳು ಹೀಗಿವೆ:

  • ಇದು ಐವರು ನ್ಯಾಯಮೂರ್ತಿಗಳ ಸರ್ವಾನುಮತದ ತೀರ್ಪು ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ.
  • ನಿರ್ಮೊಹಿ ಅಖಾಡ ಮತ್ತು ಸುನ್ನಿ ವಕ್ಫ್‌ ಬೋರ್ಡ್‌ ಅರ್ಜಿ ವಜಾಗೊಳಿಸಿದ ನ್ಯಾಯಪೀಠ, ರಾಮ್‌ಲಲ್ಲಾ ಮುಖ್ಯ ಅರ್ಜಿದಾರ ಎಂದು ಮಾನ್ಯತೆ.
  • ಮಸೀದಿಯ ಕೆಳ ಬಾಗದಲ್ಲಿ ವಿಶಾಲ ರಚನೆ ಇತ್ತು. ಅದು ಇಸ್ಲಾಮಿಕ್ ರಚನೆ ಆಗಿರಲಿಲ್ಲ. ಉತ್ಖನನ ವೇಳೆ ಸಿಕ್ಕಿರುವ ಕಲಾಕೃತಿಗಳು ಇಸ್ಲಾಮಿಕ್‌ ಆಗಿರಲಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
  • ಕೇವಲ ನಂಬಿಕೆಯ ಆಧಾರದ ಮೇಲೆ ಹಕ್ಕು ಸ್ಥಾಪಿಸಲು ಸಾಧ್ಯವಿಲ್ಲ. ಕಾನೂನು ಆಧಾರವೇ ಮಾನದಂಡ. ರಾಮ ಜನ್ಮ ತಾಳಿದ್ದು ಅಯೋಧ್ಯೆಯಲ್ಲಿ ಎಂಬ ನಂಬಿಕೆ ಇದೆ. ಇದಕ್ಕೆ ಹಲವಾರು ಪುಷ್ಠಿ ಕೂಡ ದೊರೆತಿದೆ. ಆದರೆ ಮಸೀದಿಯನ್ನು ಕೆಡವಿದ್ದು ಕಾನೂನು ಉಲ್ಲಂಘನೆ.
  • ರಾಮ್‌ಲಲ್ಲಾಗೆ ಈ ಪ್ರದೇಶ ಸೇರಿದ್ದು. ಮಂದಿರ ನಿರ್ಮಿಸಲು ಸರಕಾರ ನಿಯಮ ರೂಪಿಸಬೇಕು. ಮಂದಿರ ನಿರ್ಮಾಣ ಕೂಡ ಸರಕಾರದ್ದೇ ಹೊಣೆಯಾಗಲಿದೆ. ಮೂರು ತಿಂಗಳೊಳಗೆ ಟ್ರಸ್ಟ್‌ ರಚಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
  • ಸುನ್ನಿ ವಕ್ಫ್‌ ಬೋರ್ಡ್‌ಗೆ ಪರ್ಯಾಯ ಜಮೀನು ನೀಡಬೇಕು. ಅಯೋಧ್ಯೆಯಲ್ಲಿಯೇ ಐದು ಎಕರೆ ಜಮೀನು ನೀಡಬೇಕು ಎಂದು ತೀರ್ಪು ನೀಡಲಾಗಿದೆ.
  • ಸರಕಾರವೇ ರಾಮಮಂದಿರ ಹೊಣೆ ಹೊರಬೇಕು ಎಂದು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ಆದೇಶ ನೀಡಿದೆ.
Advertisement

Related Articles

Leave a Reply

Your email address will not be published. Required fields are marked *

Back to top button