ಹಮೀದ್ ಪಕ್ಕಲಡ್ಕ ಅವರಿಗೆ ನಿರತ ಸಾಹಿತ್ಯ ಪ್ರಶಸ್ತಿ ಪ್ರದಾನ…
ಬಂಟ್ವಾಳ : ನಿರತ ಸಾಹಿತ್ಯ ಸಂಪದದ 23 ನೇ ಹುಟ್ಟುಹಬ್ಬದ ಪ್ರಯುಕ್ತ ನಿರತ ಸಾಹಿತ್ಯ ಪ್ರಶಸ್ತಿಯನ್ನು ಅಬ್ದುಲ್ ಹಮೀದ್ ಪಕ್ಕಲಡ್ಕ ಅವರಿಗೆ ಪ್ರದಾನ ಮಾಡಲಾಯಿತು.
ಬಂಟ್ವಾಳ ತಾಲೂಕಿನ ಮಾರ್ನಬೈಲ್ ನ ಮೆಲ್ಕಾರ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಕವಿ ಮುಹಮ್ಮದ್ ಮಾರಿಪಳ್ಳ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜನಪದ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಚಿನ್ನಪ್ಪ ಗೌಡ ಅವರು ಭಾಷೆಯು ಯಾವುದೇ ಮೇಲು ಅಲ್ಲ, ಕೀಳು ಅಲ್ಲ.ನಮ್ಮ ಭಾಷೆಯನ್ನು ನಾವೇ ಬೆಳಸದೆ ಬೇರಾರು ಬಳಸಲು ಸಾಧ್ಯ. ಆಧುನಿಕತೆಗೆ ಒಗ್ಗಿಕೊಳ್ಳಬೇಕಾದ ಅವಶ್ಯಕತೆ ಅನಿವಾರ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮದಿಪು ವಿಚಾರ ಮಂಡನೆ ಮಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ತುಳುಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಮಾಡಬೇಕು. ಇದಕ್ಕೆ ನಾವು ಪ್ರತಿಯೊಬ್ಬರು ಹೋರಾಟ ನಡೆಸಬೇಕು. ಎಂಟನೇ ಪರಿಚ್ಛೇದದಲ್ಲಿ ಸೇರುವ ಅಗತ್ಯವಿದೆ. ಪ್ರತಿಯೊಬ್ಬರೂ ತುಳುವನ್ನು ಮಾತೃಭಾಷೆಯಲ್ಲಿ ಒಪ್ಪಿಕೊಂಡು ಅರ್ಜಿನಮೂನೆಗಳಲ್ಲಿ ಬರೆಯುವ ಮೂಲಕ ಸಾಬೀತು ಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರತ ಸಾಹಿತ್ಯ ಸಂಪದದ ಗೌರವಾಧ್ಯಕ್ಷ ವಿ ಸು ಭಟ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಬಿ ಮೊಹಮ್ಮದ್ ತುಂಬೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾರನಾಥ ಕೈರಂಗಳ ಅವರಿಗೆ ಸನ್ಮಾನಿಸಲಾಯಿತು.
ಸುಧಾ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಬಹುಭಾಷ ಕವಿಗೋಷ್ಠಿ ಯಲ್ಲಿ ಎಂ ಡಿ ಮಂಚಿ, ಪೂವಪ್ಪ ನೇರಳಕಟ್ಟೆ, ಜಯರಾಮಪಡ್ರೆ, ಶಂಶೀರ್ ಬುಡೋಳಿ, ಸೀತಾಲಕ್ಷ್ಮೀ ವರ್ಮ ವಿಟ್ಲ, ಅಶೋಕ್ ಎನ್ ಕಡೆಶಿವಾಲಯ, ರಜನಿ ಚಿಕ್ಕಯ್ಯಮಠ,ವಿಶ್ಚನಾಥ್ ಕುಲಾಲ್ ಮಿತ್ತೂರು, ಮೈತ್ರಿ ಭಟ್, ವಿಶ್ವನಾಥ್ ನೇರಳಕಟ್ಟೆ, ಸುಭಾಷಿಣಿ ಅವರಿಂದ ಕವನ ವಾಚನ ನಡೆಯಿತು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಕವನ,ಸಣ್ಣ ಕಥೆ, ಚುಟುಕು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾರಾದ ಪ್ರೌಢಶಾಲಾ ಸಂಚಾಲಕ ವೇದಮೂರ್ತಿ ಜನಾರ್ದನ ಎಂ ಭಟ್, ಸಾಹಿತಿ ಗೀತಾ ಎಸ್ ಕೊಂಕೋಡಿ,ಹಿರಿಯ ಸಾಹಿತಿ ಸವಿತಾ ಎಸ್ ಭಟ್ ಅಡ್ವಾಯಿ, ಕನ್ನಡ ಉಪನ್ಯಾಸಕ ಅಬ್ದುಲ್ ರಹಿಮಾನ್ ಡಿ ಬಿ, ಲೇಖಕಿ ಸುಧಾ ನಾಗೇಶ್, ನಿರತ ಸಾಹಿತ್ಯ ಸಂಪದ ಕಾರ್ಯದರ್ಶಿ ದಿನೇಶ್ ಎನ್ ತುಂಬೆ , ಮೆಲ್ಕಾರ್ ಮಹಿಳಾ ಕಾಲೇಜು ಪ್ರಾಂಶುಪಾಲ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
ನಿರತ ಸಾಹಿತ್ಯ ಸಂಪದ ಅಧ್ಯಕ್ಷ ಬೃಜೇಶ್ ಅಂಚನ್ ಸ್ವಾಗತಿಸಿದರು, ಸಂಚಾಲಕ ಅಬ್ದುಲ್ ಮಜೀದ್ ಎಸ್ ವಂದಿಸಿದರು. ಬಿ ಎಂ ರಫೀಕ್ ಕಾರ್ಯಕ್ರಮ ನಿರೂಪಿಸಿದರು.