ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣು ಮೂರ್ತಿ ದೇವಸ್ಥಾನ -ಜಾತ್ರೋತ್ಸವ….
ಬಂಟ್ವಾಳ: ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣು ಮೂರ್ತಿ ದೇವಸ್ಥಾನ ನಾವೂರು ಇದರ 9 ದಿನಗಳ ಕಾಲ ನಡೆದ ವಿಜ್ರಂಭಣೆಯ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಬಳಿಕ ಜ.19 ರಂದು ರಾತ್ರಿ ಜಾತ್ರೋತ್ಸವ ನಡೆಯಿತು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಡ್ವಂತಾಡಿ ಶ್ರೀಪಾದ ಪಾಂಗಾಣ್ಣಾಯರ ನೇತ್ರತ್ವದಲ್ಲಿ ವೈದಿಕ ವಿಧಿವಿದಾನಗಳೊಂದಿಗೆ ಭಕ್ತಸಾಗರದ ಮಧ್ಯೆ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು.
ಬೆಳಿಗ್ಗೆ ಗಂಟೆ 5 ರಿಂದ ಮಹಾಗಣಪತಿ ಹೋಮ, ಕವಾಟ ಉದ್ಘಾಟನೆ, ದೇವರಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ, ಪ್ರಾಯಶ್ಚಿತ್ತ ಶಾಂತಿ , ತತ್ವ ಹೋಮಗಳ ಕಲಾಶಾಭಿಷೇಕ, ಮಹಾಬಲಿ ಪೀಠ ಪ್ರತಿಷ್ಠೆ ಬಳಿಕ ದೇವರಿಗೆ ಕಳಸ ಅಭಿಷೇಕ ನಡೆದು ರಾತ್ರಿ ದೇವರ ಬಲಿಉತ್ಸವ ಹಾಗೂ ದೈವಗಳಿಗೆ ನೇಮ ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅನಂದ ತೀರ್ಥ ಎನ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮುರಳೀದರ ಭಟ್, ಆಡಳಿತ ಮೊಕ್ತೇಶರ ರಾಮಚಂದ್ರ ಭಟ್, ಪ್ರಧಾನ ಅರ್ಚಕ ವೆಂಕಟದಾಸ ಭಟ್ , ಪ್ರಧಾನ ಕಾರ್ಯದರ್ಶಿ ಸದಾನಂದ ಹಳೆಗೇಟು, ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು, ಕೋಶಾಧಿಕಾರಿ ಗೋಪಾಲ ಸಪಲ್ಯ ನೂಜಿ, ಗೌರವಾಧ್ಯಕ್ಷ ಗಂಗಾಧರ ವಿ.ಪೂಜಾರಿ ಅಮೈ ಗುತ್ತು, ಪ್ರಮುಖ ರಾದ ಸುರಶ್ ನಾವೂರ, ರಾಮಚಂದ್ರ ಗೌಡ ಮಣಿ, ಕರುಣೇಂದ್ರ ಪೂಜಾರಿ, ರಾಮ್ ದಾಸ ಬಂಟ್ವಾಳ, ಹರಿಶ್ಚಂದ್ರ ಭಟ್ ಮಜಲು ಎಲ್ಲಾ ಸಮಿತಿಯ ಪ್ರಮುಖರು ಹಾಗೂ ಊರಿನ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದ ರು.