ದೇವಿಪುರ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಅಮೃತ ಮಹೋತ್ಸವ…

'ಶ್ರೀ ದುರ್ಗಾಮೃತ' ಸ್ಮರಣ ಸಂಚಿಕೆ ಬಿಡುಗಡೆ...

ಮಂಗಳೂರು: ಶ್ರೀ ದುರ್ಗಾಪರಮೇಶ್ವರೀ ಸೇವಾ ಸಂಘ, ಯುವಕ ಮಂಡಲ (ರಿ.) ದೇವಿಪುರ, ತಲಪಾಡಿ ಇದರ ಅಮೃತ ಮಹೋತ್ಸವ ಸಮಾರಂಭ ಜ. 28ರಂದು ದೇವಿಪುರ ಬಾಕಿ ಮಾರುಗದ್ದೆಯಲ್ಲಿ ನೆರವೇರಿತು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಕೆ.ಎನ್. ನರಸಿಂಹ ಅಡಿಗ ದೀಪ ಪ್ರಜ್ವಲನೆ ಮಾಡಿದರು. ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಗಣೇಶ್ ಭಟ್ ಪಂಜಾಳ ತೆಂಗಿನ ಸಿರಿ ಅರಳಿಸಿ ಸಮಾರಂಭವನ್ನು ಉದ್ಘಾಟಿಸಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಮೋಹನ್ ದಾಸ ರೈ ಸಾಂತ್ಯಗುತ್ತು ಅಧ್ಯಕ್ಷತೆ ವಹಿಸಿದ್ದರು.

‘ಶ್ರೀ ದುರ್ಗಾಮೃತ’ ಬಿಡುಗಡೆ:
ಸಂಸ್ಥೆಗೆ 75 ವರ್ಷ ತುಂಬಿದ ಸಲುವಾಗಿ ರಮೇಶ್ ಆಳ್ವ ದೇವಿಪುರ ಸಂಪಾದಕತ್ವದಲ್ಲಿ ಪ್ರಕಟಿಸಿದ ‘ಶ್ರೀ ದುರ್ಗಾಮೃತ’ ಸ್ಮರಣ ಸಂಚಿಕೆಯನ್ನು ಮುಂಬೈ ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕುಳೂರು ಕನ್ಯಾನ ಸದಾಶಿವ ಕೆ.ಶೆಟ್ಟಿ ಬಿಡುಗಡೆಗೊಳಿಸಿದರು. ಸಂಚಿಕೆಯ ಗೌರವ ಸಂಪಾದಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕೃತಿಯ ಕುರಿತು ಮಾತನಾಡಿದರು.
ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ.ಪುರಾಣಿಕ್, ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದ ಮಾಜಿ ಆಡಳ್ತೆ ಮೊಕ್ತೇಸರ ಡಾ.ಜಯಪಾಲ ಶೆಟ್ಟಿ ತಲಪಾಡಿ ದೊಡ್ಡಮನೆ, ಅಲಂಕಾರ ಗುಡ್ಡೆ ಮಲರಾಯ ಧೂಮಾವತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ದೊಡ್ಡಮನೆ ತಲಪಾಡಿ, ಕಿನ್ಯಾ ಬೆಳೆರಂಗೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನ ಆಡಳಿತ ಮೊಕ್ತೇಸರ ಬಾಲಕೃಷ್ಣ ಸಾಮಾನಿ ಸಾಂತ್ಯಗುತ್ತು, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ, ಮಂಗಳೂರು ವಿ.ವಿ. ಅಡ್ಜಂಕ್ಟ್ ಪ್ರಾಧ್ಯಾಪಕ ಟಿ.ಪಿ.ಎಂ.ಪಕ್ಕಳ, ಉದ್ಯಮಿ ಪ್ರಭಾಕರ ಶೆಟ್ಟಿ ಕಿನ್ಯಾ ಗುತ್ತು, ವಿಠಲ ಶೆಟ್ಟಿ ಕಾರಂತರ ಪಾಲು, ಡಾ.ದಿವ್ಯ ಶೆಟ್ಟಿ ಮಧು ವಿಜಯ ತಲಪಾಡಿ, ಅಂಬಾರು ಚಾಮುಂಡೇಶ್ವರಿ ಕ್ಷೇತ್ರದ ವಿಜಯ ಪಂಡಿತ್, ಮುಂಬೈ ಉದ್ಯಮಿ ಭಾಸ್ಕರ ಪೂಜಾರಿ ದೊಡ್ಡುಗುರಿ ನೆತ್ತಿಲ, ಅಂಕಿತ್ ಹಾರ್ಡ್ವೇರ್ ನ ದಾಮೋದರ ಪಡ್ಪು ಮುಖ್ಯ ಅತಿಥಿಗಳಾಗಿದ್ದರು.

ಸಾಧಕರ ಸನ್ಮಾನ:
ತಲಪಾಡಿ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಕೊಲ್ಲೂರು ದೇವಳದ ಡಾ.ನರಸಿಂಹ ಅಡಿಗ, ದೇವಿ ಪುರದ ಪ್ರಧಾನ ಅರ್ಚಕ ಗಣೇಶ್ ಭಟ್, ಅಮೃತಮಹೋತ್ಸವ ಸಮಿತಿ ಗೌರವಾಧ್ಯಕ್ಷ ಟಿ. ರಾಮಯ್ಯ ಕಿಲ್ಲೆ ಮೇಗಿನ ಪಂಜಾಳ ಗುತ್ತು, ಅಧ್ಯಕ್ಷ ರಾಮ ಮನೋಹರ್ ರೈ ರೈಮಹಲ್ ತಲಪಾಡಿ, ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರ್; ಪ್ರಮುಖರಾದ ಶ್ರೀನಿವಾಸನ ನೆಲ್ಲಿತ್ತಾಯ, ಜಯಂತ ಸಾಲಿಯಾನ್, ಮಹಾಬಲ ಶೆಟ್ಟಿ, ರಘುನಾಥ ಶೆಟ್ಟಿ, ಜನಾರ್ಧನ ಶೆಟ್ಟಿ, ಶಶಿಧರ ದೇವಾಡಿಗ, ವಿಶ್ವನಾಥ ಯಾನೆ ಮುಂಡಪ್ಪ ರೈ ಸನ್ಮಾನ ಗೌರವವನ್ನು ಸ್ವೀಕರಿಸಿದರು. ಸ್ಮರಣ ಸಂಚಿಕೆಯ ಮಾರ್ಗದರ್ಶಕರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಅಲ್ಲದೆ ಅಮೃತ ಮಹೋತ್ಸವ ಸಮಿತಿ ಸದಸ್ಯರು ಮತ್ತು ದೇವಸ್ಥಾನದ ಸಿಬಂದಿಗಳನ್ನು ಸಭೆಯಲ್ಲಿ ಸ್ಮರಣಿಕೆಯೊಂದಿಗೆ ಅಭಿನಂದಿಸಲಾಯಿತು.
ಶ್ರೀ ದುರ್ಗಾಪರಮೇಶ್ವರೀ ಸೇವಾ ಸಂಘ ಯುವಕ ಮಂಡಲದ ಅಧ್ಯಕ್ಷ ರಮೇಶ್ ಆಳ್ವ ದೇವಿಪುರ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ವರದಿ ಓದಿದರು; ಗೌರವ ಸಲಹೆಗಾರ ನಾರಾಯಣ ಕುಲಾಲ್ ವಂದಿಸಿದರು. ದಯಾನಂದ ಕತ್ತಲ್ ಸಾರ್ ಮತ್ತು ಸದಾಶಿವ ಆಳ್ವ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.

whatsapp image 2024 01 30 at 5.16.09 pm

whatsapp image 2024 01 30 at 5.15.56 pm

Sponsors

Related Articles

Back to top button