ಪಶ್ಚಿಮಘಟ್ಟ ದಲ್ಲಿ ಭಾರಿ ಮಳೆ- ಆದಿ ಸುಬ್ರಹ್ಮಣ್ಯ ದೇವಸ್ಥಾನ ಜಲಾವೃತ….

ಸುಬ್ರಹ್ಮಣ್ಯ: ಪಶ್ಚಿಮಘಟ್ಟದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ‌ ಕುಕ್ಕೆ ಸುಬ್ರಹ್ಮಣ್ಯ ದ ದರ್ಪಣ ತೀರ್ಥ ನದಿ ಉಕ್ಕಿ ಹರಿಯಲಾರಂಭಿಸಿದೆ.ಕುಮಾರ ಪರ್ವತದಿಂದ ಬರುತ್ತಿರುವ ದರ್ಪಣ ತೀರ್ಥ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಆದಿ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.
ಕುಕ್ಕೆ ರಥಬೀದಿಯ ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದ್ದು, ಕುಕ್ಕೆ ಸುಬ್ರಹ್ಮಣ್ಯ ದಿಂದ ಆದಿ‌ ಸುಬ್ರಹ್ಮಣ್ಯ ಸಂಪರ್ಕಿಸುವ ಕಿರು ಸೇತುವೆಯೂ ಮುಳುಗಡೆಯಾಗಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.ದರ್ಪಣ ತೀರ್ಥ ನದಿ ಪಾತ್ರದಲ್ಲಿರುವ ಮನೆಗಳು ಹಾಗೂ ಕೆಲವು ವಸತಿ ಗೃಹಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ. Kukke1 300x211

Related Articles

Leave a Reply

Your email address will not be published. Required fields are marked *