ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ- ಆಮಂತ್ರಣ ಪತ್ರಿಕೆ ಬಿಡುಗಡೆ…
 
 ಸುಳ್ಯ: ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇದರ 21 ನೇ ಪ್ರತಿಷ್ಠಾ ವಾರ್ಷಿಕೋತ್ಸವವು ಏಪ್ರಿಲ್ 11 ಮತ್ತು 12 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಮಾ. 21 ರಂದು ನಡೆಯುತು.
 ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಮಾಜಿ ವ್ಯವಸ್ಥಾಪನ ಸದಸ್ಯ ಪದ್ಮನಾಭ ಅಳಿಕೆಮಜಲು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಡಿ. ಎಸ್ ವಿದ್ಯಾಧರ, ನಿಕಟಪೂರ್ವ ಅಧ್ಯಕ್ಷ ಡಿ. ಎಸ್ ಗಿರೀಶ್, ದೇವಾಲಯದ ಅರ್ಚಕರಾದ ವಿಶ್ವಾಸ್ ಎಂ. ಭಟ್, ಉತ್ಸವ ಸಮಿತಿ ಅಧ್ಯಕ್ಷ ಕೆ. ಕೆ ಸೀತಾರಾಮ, ಕಾರ್ಯದರ್ಶಿ ಪ್ರಭಾಕರ ಎಸ್. ಎಸ್, ಉಪಾಧ್ಯಕ್ಷ ಶ್ರೀಮತಿ ಲೀಲಾವತಿ
 ವಾಸುದೇವ, ಕೋಶಾಧಿಕಾರಿ ಡಿ. ಕೆ ಶುಭಾಶ್, ಸಂಚಾಲಕ ಡಿ.ಕೆ. ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.

 
 




