ಮಲಪ್ಪುರಂ ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ಟಿ ಎಂ ಶಾಹೀದ್ ತೆಕ್ಕಿಲ್ ಅಧಿಕಾರ ಸ್ವೀಕಾರ…

ಮಲಪ್ಪುರಂ: ಎಐಸಿಸಿ ಯಿಂದ ಮಲಪ್ಪುರಂ ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡ ಟಿ ಎಂ ಶಾಹೀದ್ ತೆಕ್ಕಿಲ್ ರವರು ಜೂ.10 ರಂದು ಮಲಪ್ಪುರಂ ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ವಿ ಎಸ್ ಜೋಯಿ, ಮಾಜಿ ಸಚಿವ ಕೆ ಪಿ ಅನಿಲ್ ಕುಮಾರ್ ಎಂ ಎಲ್ ಎ, ಕೆಪಿಸಿಸಿ ಉಪಾಧ್ಯಕ್ಷರಾದ ಪಿ ಸಿ ವಿಷ್ಣುನಾಥ್ ಎಂ ಎಲ್ ಎ,ಪ್ರಧಾನ ಕಾರ್ಯದರ್ಶಿಗಳಾದ ಆರ್ಯಾಡನ್ ಸೌಕತ್, ಆಲಿಪಟ್ಟ ಜಮೀಲ, ಯು ಡಿ ಯೆಫ್ ಜಿಲ್ಲಾ ಅಧ್ಯಕ್ಷ ಅಜಯ್ ಮೋಹನ್, ಕೆಪಿಸಿಸಿ ಇತರ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೇಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಚುನಾವಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪಾನಕ್ಕಾಡ್ ಜುಮಾ ಮಸ್ಜಿದ್ ನಲ್ಲಿ ಜುಮಾ ನಮಾಜಿನ ಬಳಿಕ ಪಾನಕ್ಕಾಡ್ ಉಮರ್ ಅಲಿ ಶಿಹಾಬ್ ತಂಘಲ್,ಪಾನಕ್ಕಾಡ್ ಮೊಹಮ್ಮದ್ ಅಲಿ ಶೀಹಾಬ್ ತಂಘಲ್,ಪಾನಕಕ್ಕಾಡ್ ಹೈದರ್ ಅಲಿ ಶಿಹಾಬ್ ತಂಘಲ್ ರವರ ಖಬರ್ ಜಿಯಾರತ್ ಮಾಡಿದರು. ಪಾನಕ್ಕಾಡ್ ಮುನವ್ವಿರಲಿ ಶಿಹಾಬ್ ತಂಘಲ್ ದುವಾ ನೆರವೇರಿಸಿದರು.

IMG 20220610 WA0047 300x167

IMG 20220610 WA0048 300x169

IMG 20220610 WA0044 300x169

IMG 20220610 WA0046 300x169

Related Articles