ನಂದಾವರ ಚಿಕ್ಕಮೇಳ ಶುಭಾರಂಭ…

ಬಂಟ್ವಾಳ: ಶ್ರೀ ಕ್ಷೇತ್ರ ನಂದಾವರ ದಿಂದ ಮನೆಮನೆಗೆ ಯಕ್ಷಗಾನ ಪ್ರದರ್ಶನ ನೀಡುವ ನಂದಾವರ ಚಿಕ್ಕಮೇಳ ಜೂ.10 ರಂದು ಪಾಂಡವ ಅಶ್ವಮೇಧ ಎಂಬ ಕಥಾನಕವನ್ನು ಪ್ರದರ್ಶಿಸಿ ಮಳೆಗಾಲದ ತಿರುಗಾಟ ಆರಂಭಿಸಿತು.
ಸಜಿಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆಲಾಡಿ ಅರವಿಂದ ಭಟ್ ಪದ್ಯಾಣ, ಸಮಿತಿ ಸದಸ್ಯರಾದ ಅರುಣ್ ಕುಮಾರ್.,ಜಯಶ್ರೀ ಅಶೋಕ್, ಚಿಕ್ಕಮೇಳ ಸಂಚಾಲಕರಾದ ಭಾಸ್ಕರ ಸರಪಾಡಿ, ದೇವಸ್ಥಾನದ ಪ್ರಬಂಧಕರಾದ ರಾಮಕೃಷ್ಣ, ರೂಪೇಶ್ ಆಚಾರ್ಯ, ಕಲಾವಿದರಾದ ಜಯರಾಮ ಅಡೂರು, ಕುಸುಮಾಕರ ಮುಡಿಪು, ಶಿವರಾಮ ಜೋಗಿ ಬಿಸಿ ರೋಡ್, ಸಜೀಪ ಸುಬ್ರಹ್ಮಣ್ಯ, ಸಂದೀಪ್ ಕೊಳ್ಯೂರು, ಅಶ್ವಥ್ ಮಂಜನಾಡಿ ಮೊದಲಾದವರು ಉಪಸ್ಥಿತರಿದ್ದರು.