ಅನಿವಾಸಿ ಉದ್ಯಮಿ ಅಬ್ದುಲ್ ಮಜೀದ್ ರವರಿಗೆ ಗೌರವಾರ್ಪಣೆ…

ಸುಳ್ಯ: ಮಲೆನಾಡು ಚಾರಿಟೇಬಲ್ ಟ್ರಸ್ಟ್ [ರಿ] ಇದರ ವತಿಯಿಂದ ಅನಿವಾಸಿ ಉದ್ಯಮಿ ಮರಸಂಕ ಅಬ್ದುಲ್ ಮಜೀದ್ ರವರನ್ನು ಗೌರವಿಸಲಾಯಿತು.
ವಿವಿದ ಸಂಘ ಸಂಸ್ಥೆಗಳಲ್ಲಿ ಅಹರ್ನಿಶಿಯಾಗಿ ದುಡಿದು, ಸಮಾಜ ಸೇವೆಯಲ್ಲಿ ನಿರತರಾಗಿರುವ ಪ್ರಕೃತ ಸುಳ್ಯದ ಅನ್ಸಾರಿಯ ದಮಾಮ್ ಕಮಿಟಿಯ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಜಾಲ್ಸೂರಿನ ಮರಸಂಕ ಅಬ್ದುಲ್ ಮಜೀದ್ ರವರನ್ನು ಸುಳ್ಯ ಭೇಟಿಯ ವೇಳೆ ಸಂಸ್ಥೆಯ ಕಛೇರಿಯಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಅದ್ಯಕ್ಷ ಹಾಗೂ ನ.ಪo ಸದಸ್ಯ ರಿಯಾಝ್ ಕಟ್ಟೆಕ್ಕಾರ್, ಅನ್ಸಾರಿಯ ಎಜುಕೇಶನ್ ಸೆಂಟರ್ ನಿರ್ದೇಶಕ ಕೆ.ಬಿ.ಇಬ್ರಾಹಿಂ, ಈ ವಾರ್ತೆಯ ಮುಖ್ಯ ಪ್ರವರ್ತಕ ರಶೀದ್ ಜಟ್ಟಿಪ್ಪಳ್ಳ ಹಾಗೂ ಮತ್ತಿತರರು ಉಪಸ್ತಿತರಿದ್ದರು.