ಜ.26 – ಕುಂಬ್ರದಲ್ಲಿ ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಗೊಳಿಸಲು ತಾಜುದ್ದೀನ್ ಅರಂತೋಡು ಕರೆ…
ಸುಳ್ಯ: ಎಸ್ ಕೆ ಎಸ್ ಎಸ್ ಎಫ್ ದ. ಕ ಜಿಲ್ಲಾ ಈಸ್ಟ್ ಜಿಲ್ಲೆ ವತಿಯಿಂದ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ವಾಕ್ಯದೊಂದಿಗೆ ಜ.26 ರ ಗಣರಾಜ್ಯೋತ್ಸವ ದಿನದಂದು ಹಮ್ಮಿಕೊಂಡ ಮಾನವ ಸರಪಳಿ ಪುತ್ತೂರು ತಾಲೂಕಿನ ಕುಂಬ್ರದಲ್ಲಿ ನಡೆಯುವ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಲು ಎಸ್ ಕೆಎಸ್ ಎಸ್ ಎಫ್ ಕಾರ್ಯಕರ್ತ, ಸಮಾಜ ಸೇವಕ ತಾಜುದ್ದೀನ್ ಅರಂತೋಡು ಕರೆ ನೀಡಿದ್ದಾರೆ.
ರಾಜ್ಯಾದ್ಯಂತ ವಿವಿಧ ಜಿಲ್ಲಾ ಕೇಂದ್ರದಲ್ಲಿ ಏಕ ಕಾಲದಲ್ಲಿ ಮಾನವ ಸರಪಳಿ ಕಾರ್ಯಕ್ರಮ ನಡೆಯುಲಿದೆ. ಈ ಬಾರಿ ದ.ಕ ಈಸ್ಟ್ ವ್ಯಾಪ್ತಿಯ 7 ವಲಯಗಳು 27ಕ್ಲಸ್ಟರ್ ಗಳು144 ಶಾಖೆಗಳ ಸದಸ್ಯರುಗಳು ಹಾಗೂ ಸಾರ್ವಜನಿಕರು ಒಟ್ಟು ಸೇರಿ ಸಂಜೆ 3 ಗಂಟೆಗೆ ಪರ್ಪುಂಜದಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದ್ದು ದಫ್ ತಂಡ, ಸ್ಕೌಟು ತಂಡ, ವಿಖಾಯ ಸಮವಸ್ತ್ರ ಗಳಿಂದ ಮೆರವಣಿಗೆಗೆ ಮೆರಗು ನೀಡಲಿದ್ದಾರೆ. ಬಳಿಕ ಕುಂಬ್ರ ಜಂಕ್ಷನ್ ನಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಮೌಲಾನ ಅನಿಸ್ ಕೌಸರಿ, ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ನಿಕೇತ್ ರಾಜ್ ಮೌರ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಲ್ಲದೆ ಜಿಲ್ಲೆಯ ಖ್ಯಾತ ಭಾಷಣಗಾರರು ಸಾಮಾಜಿಕ ಧಾರ್ಮಿಕ ಉಲಮಾ ಉಮಾರಾ ಮುಖಂಡರು ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಈಸ್ಟ್ ಜಿಲ್ಲೆಯ ಎಸ್ ಕೆಎಸ್ ಎಸ್ ಎಫ್ ಶಾಖೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಾಜುದ್ದೀನ್ ಅರಂತೋಡು ಕರೆ ನೀಡಿದ್ದಾರೆ.