ಪೆರಾಜೆ – ಆಯುಷ್ಮಾನ್ ಕಾರ್ಡು ದಾಖಲಾತಿ ಶಿಬಿರದಲ್ಲಿ 700ಕ್ಕೂ ಹೆಚ್ಚು ಮಂದಿ ದಾಖಲಾತಿ…
ಬಂಟ್ವಾಳ : ಶ್ರೀದೇವಿ ಭಜನಾ ಮಂದಿರ ಪೆರಾಜೆಯಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನ ಪ್ರಯುಕ್ತ ಆ.29 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಆಯುಷ್ಮಾನ್ ಕಾರ್ಡು ದಾಖಲಾತಿ ಶಿಬಿರದಲ್ಲಿ 700ಕ್ಕೂ ಹೆಚ್ಚು ಮಂದಿ ದಾಖಲಾತಿ ಮಾಡಿದರು.
ಸ್ಥಳೀಯ ಯುವ ವೇದಿಕೆ ಪೆರಾಜೆ , ಬಿಜೆಪಿ ಯುವ ಮೋರ್ಚಾ ಮತ್ತು ಮಹಿಳಾ ಮೋರ್ಚಾ ಇವರ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಆಯುಷ್ಮಾನ್ ಕಾರ್ಡು ಯೋಜನೆಯನ್ನು ಮನೆ ಮನೆಗೆ ತಲುಪಿಸಬೇಕು. ಕಾರ್ಯಕರ್ತರು ಕಾರ್ಡು ಮಾಡದೇ ಇರುವವರನ್ನು ಸಂಪರ್ಕಿಸಿ ಕಾರ್ಡು ಮಾಡಿಸಬೇಕು ಎಂದು ತಿಳಿಸಿದರು.
ಬೂತ್ ಸಮಿತಿ ಅಧ್ಯಕ್ಷ ರಾಜಾರಾಮ ಕಾಡೂರು, ಗ್ರಾ.ಪಂ ಸದಸ್ಯ ಉಮೇಶ್ ಎಸ್. ಪಿ., ಬಿಜೆಪಿ ಮುಖಂಡರಾದ ಪುಷ್ಪ್ಪರಾಜ್ ಚೌಟ, ನಾರಾಯಣ ಶೆಟ್ಟಿ ಮಾಣಿ, ಗ್ರಾ.ಪಂ ಮಾಜಿ ಸದಸ್ಯರಾದ ಶ್ರೀನಿವಾಸ ಪೂಜಾರಿ , ಭಾರತಿ ಪೆರಾಜೆ ,ಉಪನ್ಯಾಸಕ ಯತಿರಾಜ ಪೆರಾಜೆ ಮೊದಲಾದವರು ಕಾರ್ಯ ನಿರ್ವಹಿಸಿದರು.
ತಾಲೂಕು ಮಹಿಳಾ ಮೋರ್ಚ ಕಾರ್ಯದರ್ಶಿ ಸೀಮಾ ಮಾಧವ, ಜಿಲ್ಲಾ ಯುವ ಮೋರ್ಚ ಸದಸ್ಯ ವಿನಿತ್ ಶೆಟ್ಟಿ, ರತ್ನಾಕರ ಶೆಟ್ಟಿ ಕಲ್ಲಡ್ಕ, ಮಹಿಳಾ ಮೋರ್ಚ ಉಪಾಧ್ಯಕ್ಷರಾದ ಲಖಿತ ಆರ್. ಶೆಟ್ಟಿ, ಹಿರಣ್ಮಯಿ ಮೊದಲಾದವರು ಶಿಬಿರಕ್ಕೆ ಭೇಟಿ ನೀಡಿದರು.