ಸುಳ್ಯ ಹವ್ಯಕ ವಲಯದ ದಶಂಬರ ತಿಂಗಳ ಶಾಸನತಂತ್ರ ಸಭೆ….
ಸುಳ್ಯ: ಸುಳ್ಯ ಹವ್ಯಕ ವಲಯದ ಪದಾಧಿಕಾರಿಗಳ ದಶಂಬರ ತಿಂಗಳ ಮಾಸಿಕ ಸಭೆಯು ಶ್ರೀರಾಮ ಘಟಕದ ಕೀಲಾರ್ಕಜೆ ವೇದ ಮೂರ್ತಿ ಇವರ ಮನೆಯಲ್ಲಿ ಡಿ.1ರಂದು ವಲಯದ ಅಧ್ಯಕ್ಷರಾದ ಈಶ್ವರ ಕುಮಾರ್ ಉಬರಡ್ಕ ಇವರ ನೇತೃತ್ವದಲ್ಲಿ ನಡೆಯಿತು.
ಘಟಕದ ಹಿರಿಯರಾದ ಸುಬ್ರಮಣ್ಯ ಭಟ್ ಕೊಡಪಾಲ ಧ್ವಜಾರೋಹಣಮಾಡಿದರು. ದೀಪೋಜ್ವಲನ, ಶಂಖನಾದ, ಗುರುವಂದನೆ, ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರ ಹಾಗೂ ಗೋಸ್ತುತಿಯೊಂದಿಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು.
ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿತ ಗೊಳ್ಳಲಿರುವ ವಿಷ್ಣುಗುಪ್ತ ವಿದ್ಯಾಪೀಠದ ಕುರಿತು ಪ್ರೋ. ಶ್ರೀ ಕೃಷ್ಣ ಭಟ್ ಇರುವ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.
ಜನವರಿ ತಿಂಗಳಿನಲ್ಲಿ ಸಮರ್ಪಿಸುವ ದೀಪಕಾಣಿಕೆ, ಗುರುಕುಲ ಕಾಣಿಕೆ ಹಾಗು ಬೆಳೆಸಮರ್ಪಣೆ ಬಗ್ಗೆ ಮಾಹಿತಿ ನೀಡಿ, ಪ್ರತಿ ಮನೆಯ ಗುರುಭಕ್ತರು ಗುರಿಕ್ಕಾರರ ಮನೆಗೆ ಹೋಗಿ ಸಮರ್ಪಿಸುವ ನಿರ್ಣಯ ಕೈಗೊಳ್ಳಲಾಯಿತು.ಶ್ರೀಮಠದ ಅಂಗಸಂಸ್ಥೆಯಾದ ಸರಳಿ ಕುಂಜ ದಲ್ಲಿರುವ ಧರ್ಮಾರಣ್ಯ ದಲ್ಲಿ ನಡೆಯುವ ಅಭಿವೃದ್ಧಿ ಸಮಿತಿಯ ಸಭೆಯ ವರದಿಯನ್ನು ಅಂಗಸಂಸ್ಥೆಯ ಪ್ರತಿನಿಧಿ ಈಶ್ವರ ಕುಮಾರ ಉಬರಡ್ಕ ಸಭೆಗೆ ತಿಳಿಸಿದರು.
ವಲಯದ ಅಧ್ಯಕ್ಷರಾದ ಈಶ್ವರ ಕುಮಾರ ಉಬರಡ್ಕ ಸ್ವಾಗತಿಸಿದರು. ಕಾರ್ಯದರ್ಶಿಯಾದ ವಿಷ್ಣು ಕಿರಣ ನೀರಬಿದಿರೆ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಗತ ಸಭೆಯ ವರದಿ ನೀಡಿ ಸಭಾ ನಿರ್ವಹಣೆ ಮಾಡಿದರು.ಕೋಶಾಧಿಕಾರಿಯಾದ ಸರವು ಈಶ್ವರ ಭಟ್ ಲಕ್ಷ್ಮೀ ಶಾಖೆಯ ಲೆಕ್ಕ ಪತ್ರ ಮಂಡಿಸಿದರು.ವಲಯ ಪದಾಧಿಕಾರಿಗಳು ವಿಭಾಗವಾರು ವರದಿ ಮಂಡಿಸಿದರು.
ವಲಯದ 9 ಪದಾಧಿಕಾರಿಗಳು 5 ಗುರಿಕಾರರು ಮತ್ತು ಹವ್ಯಕ ಬಂಧುಗಳು ಸೇರಿದಂತೆ ಸುಮಾರು 28 ಜನ ಗುರು ಭಕ್ತರು ಹಾಜರಿದ್ದರು.ರಾಮ ತಾರಕ ಜಪ, ಶಾಂತಿ ಮಂತ್ರ ದೊಂದಿಗೆ ಧ್ವಜಅವರೋಹಣ, ಶಂಖನಾದವಾಗಿ ಸಭೆಯು ಮುಕ್ತಾಯವಾಯಿತು.