ನೇತ್ರಾವತಿ ಬಳಗ ಮಂಜಲ್ ಪಾದೆ -ಸೀಸನ್ ತ್ರೀ ಕ್ರಿಕೆಟ್ ಪಂದ್ಯಾಟ…

ಬಂಟ್ವಾಳ: ನೇತ್ರಾವತಿ ಬಳಗ ಮಂಜಲ್ ಪಾದೆ ಸಜಿಪ ಮುನ್ನೂರು ಇದರ ಆಶ್ರಯದಲ್ಲಿ ಏ.26 ರಂದು ಹೊನಲು ಬೆಳಕಿನ ಸೂಪರ್ ಸಿಕ್ಸ್ ಆರು ತಂಡಗಳ ಲೀಗ್ ಮಾದರಿಯ ಸೀಸನ್ ತ್ರೀ ಕ್ರಿಕೆಟ್ ಪಂದ್ಯಾಟವನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕ್ರೀಡೆಯಿಂದ ಸಂಘಟನೆ, ಒಗ್ಗಟ್ಟು, ಹೊಂದಾಣಿಕೆ ,ಸಮಯ ಪ್ರಜ್ಞೆಯನ್ನು ಆಟಗಾರರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ಆಟಗಾರರು ಸದೃಢರಾಗುತ್ತಾರೆ ಎಂದು ಶುಭ ಹಾರೈಸಿದರು.
ಇತ್ತೀಚಿಗೆ ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದನ ಕೃತ್ಯದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 2024 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಗ್ರಾಮಕ್ಕೆ ಹೆಮ್ಮೆಯನ್ನು ತಂದುಕೊಟ್ಟ ಕುಮಾರಿ ಪ್ರಾರ್ಥನಾ, ಕುಮಾರಿ ನಿಖಿತ ಇವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಪ್ರಗತಿಪರ ಕೃಷಿಕ ಅಂದಾಡಿ ಸೀತಾರಾಮ ಗಟ್ಟಿ, ಸಂಘದ ಅಧ್ಯಕ್ಷ ಶ್ರೇಯಸ್ ಗಟ್ಟಿ, ಪಂಚಾಯತ್ ಸದಸ್ಯರಾದ ಸರೋಜಿನಿ ಪೂಜಾರಿ, ಸುಂದರ ಪೂಜಾರಿ, ಶಾರದ ಯುವಕ ಸಂಘದ ಅಧ್ಯಕ್ಷ ಪರಮೇಶ್ವರ ಪೂಜಾರಿ,ತಿಮ್ಮಪ್ಪ ಗಟ್ಟಿ,ದಯಾನಂದ ಕುಲಾಲ್, ಧರ್ನಪ್ಪ ಗಟ್ಟಿ, ಶೇಖರಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button