ಪ್ರವಾದಿ ಸಂದೇಶ ಹಾಗೂ ಜೀವನಚರ್ಯೆ ಪ್ರಪಂಚಕ್ಕೆ ಮಾದರಿ ಟಿ ಎಂ ಶಾಹಿದ್ ತೆಕ್ಕಿಲ್…

ಕುಂಬರ್ಚೋಡು ಮಸೀದಿಗೆ ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ 10ಸಾವಿರ ಸಹಾಯಧನ...

ಸುಳ್ಯ: ಮುಹಿಯದ್ದಿನ್ ಜುಮಾ ಮಸೀದಿ ಕುಂಬರ್ಚೋಡು ಬೋಳುಬೈಲ್ ಇಲ್ಲಿನ ಮಸೀದಿ ಮದರಸ ಅಭಿವೃದ್ಧಿ ಕಾಮಗಾರಿಗಳಿಗೆ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ವತಿಯಿಂದ ರೂಪಾಯಿ 10 ಸಾವಿರ ಧನಸಹಾಯವನ್ನು ಸ್ಥಾಪಹಾಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಮಸೀದಿಯ ಅಧ್ಯಕ್ಷ ಹನೀಫ್ ಹಾಜಿ ಯವರಿಗೆ ಮಸೀದಿಯಲ್ಲಿ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.
ಮುಖ್ಯ ಅತಿಥಿ ನೆಲೆಯಿಂದ ಮಾತನಾಡಿದ ಅವರು ಸಾಮಾಜಿಕ ಕ್ಷೇತ್ರದಲ್ಲಿ ಯುವಕರು ಹೆಚ್ಚಾಗಿ ಭಾಗವಹಿಸಲು, ಕೋಮು ಸೌಹಾರ್ದತೆಗೆ ಹೆಚ್ಚು ಒತ್ತು ಕೊಡಲು ಕರೆ ನೀಡಿದರು. ಪ್ರವಾದಿಯವರ ಜೀವನಚರ್ಯೆ ಪ್ರಪಂಚಕ್ಕೆ ಮಾದರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹನೀಫ್ ನಿಜಾಮಿ ಕಾಸರಗೋಡು ಮೀಲಾದ್ ಸಂದೇಶ ನೀಡಿದರು. ಹನೀಫ್ ಹಾಜಿ ಅಧ್ಯಕ್ಷತೆ ವಹಿಸಿದರು. ಕೆ ಎಂ ಮುಸ್ತಾಫ, ಹಮೀದ್ ಹಾಜಿ, ಅಬ್ದುಲ್ ರಹ್ಮಾನ್ ಮೊಗರ್ಪಣೆ, ಶರೀಫ್ ಟಿ ಎ, ಅಹಮದ್ ಹಾಜಿ ಸವನೂರು, ಇಬ್ರಾಹಿಂ ಕತರ್, ಹಾರಿಸ್ ಚೆರ್ಕಳ, ಶರೀಫ್ ಇಂಜಿನಿಯರ್ ಭಾಗವಹಿಸಿದರು.ಅಶ್ರಫ್ ಮುಸ್ಲಿಯರ್ ಸ್ವಾಗತಿಸಿ, ಮುಜೀಬ್ ಪೈಚಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಸರ್ವರಿಗೂ ಸೀರಾಣಿ ವಿತರಿಸಯಿತು

Related Articles

Back to top button