ಸುಳ್ಯದಲ್ಲಿ ವೋಟ್ ಚೋರಿ ಗದ್ದಿ ಚೋಡ್ ಅಭಿಯಾನಕ್ಕೆ ಚಾಲನೆ…
ಸುಳ್ಯ ಬ್ಲಾಕ್ ನಿಂದ 2500 ಸಹಿ ಸಂಗ್ರಹದ ಗುರಿ- ಪಿ. ಸಿ. ಜಯರಾಮ್...

ಸುಳ್ಯ: ಕೆಪಿಸಿಸಿ ನಿರ್ದೇಶನದಂತೆ ಪ್ರತೀ ಬ್ಲಾಕ್ ನಲ್ಲಿ ಮತಗಳ್ಳತನ ವಿರುದ್ಧ ಜನ ಜಾಗೃತಿ ಅಭಿಯಾನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿ ಯಲ್ಲಿ ಚಾಲನೆ ನೀಡಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಎಂ. ಶಹೀದ್ ಅಭಿಯಾನಕ್ಕೆ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾo ಮಾತನಾಡಿ ಪ್ರತೀ ಬೂತ್ ಮಟ್ಟದಲ್ಲಿ ಸಹಿ ಸಂಗ್ರಹ ಆಂದೋಲನ ನಡೆಯಲಿದ್ದು ಇದರ ಪರಿಣಾಮ ಮುಂದೆ ದೇಶದಲ್ಲಿ ನ್ಯಾಯಯುತ ಮತ್ತು ಭಯ ಮುಕ್ತ ಚುನಾವಣೆ ನಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಧನಂಜಯ ಆಡ್ಪಂಗಾಯ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ. ಜೆ., ಕೆಪಿಸಿಸಿ ಅಲ್ಪ ಸಂಖ್ಯತರ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಮಹೇಶ್ ಬೆಳ್ಳಾರ್ಕಾರ್, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಪರಮೇಶ್ವರ್ ಕೆಂಬಾರೆ, ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಇಂಟಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ, ಮಾಧ್ಯಮ ವಕ್ತಾರ ನಂದರಾಜ್ ಸಂಕೇಶ್, ಕಿಸಾನ್ ಘಟಕ ಅಧ್ಯಕ್ಷ ಸುರೇಶ್ ಅಮೈ, ಮಹಮ್ಮದ್ ಫವಾಜ್, ಅಣ್ಣಾ ದೊರೆ, ಇಬ್ರಾಹಿಂ ಹಾಜಿ ಕತಾರ್ ಮೊದಲಾದವರು ಉಪಸ್ಥಿತರಿದ್ದರು.