ಕಾರ್ತಿಕ ದೀಪೋತ್ಸವದ ಆಮಂತ್ರಣ ಪತ್ರ ಬಿಡುಗಡೆ…

ಬಂಟ್ವಾಳ: ಶ್ರೀ ಕಾಳಾದ್ರಿ ಸಾನಿಧ್ಯ ಬಿಲ್ಲಪದವು ಸಜೀಪ ಶ್ರೀ ಕ್ಷೇತ್ರದಲ್ಲಿ ಅ. 21 ರಿಂದ ನ.20 ರ ತನಕ ಕಾರ್ತಿಕ ದೀಪಾರಾಧನೆ ನಡೆಯಲಿದ್ದು ಕಾರ್ತಿಕ ದೀಪೋತ್ಸವದ ಆಮಂತ್ರಣ ಪತ್ರವನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ ನಿರ್ದೇಶಕ ರಾಜಾರಾಮ ಭಟ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ,ವೆಂಕಟೇಶ್ವರ ಭಟ್, ಅರ್ಚಕ ಗಣಪತಿ ಮಹಾಬಲೇಶ್ವರ ಭಟ್, ನೌಕಾದಳ ನಿವೃತ್ತ ಸೇನಾ ಕಮಾಂಡರ್ ವಸಂತ ರಾವ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ್ ಆಳ್ವ, ಸುಧಾಕರ, ಪ್ರವೀಣ್ ಭಂಡಾರಿ, ಸುಭಾಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.