ಗುರುವಾರ -ಕಲ್ಲಡ್ಕದ 49 ವರ್ಷದ ವ್ಯಕ್ತಿ ಕೊರೊನಾಗೆ ಬಲಿ…
ಮಂಗಳೂರು: ಬಂಟ್ವಾಳ ತಾಲೂಕಿನ ಕಲ್ಕಡ್ಕ ನಿವಾಸಿ, 49 ವರ್ಷದ ವ್ಯಕ್ತಿ ಕೊರೊನಾ ಪೀಡಿತರಾಗಿ ಇಂದು(ಗುರುವಾರ) ಸಾವನ್ನಪ್ಪಿದ್ದಾರೆ.
ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಶನಿವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ, ಟಿ.ಬಿ.ಹಾಗೂ ಲಿವರ್ ನ ಸಮಸ್ಯೆಯಿಂದ ಅವರು ಬಳಲುತ್ತಿದ್ದರು.ಆದಿತ್ಯವಾರ ವೈದ್ಯರ ಪರೀಕ್ಷೆಯ ಬಳಿಕ ಅವರಿಗೆ ಕೋವಿಡ್ ಸೊಂಕು ದೃಢವಾಗಿದೆ.
ಇವರಿಗೆ ಸೊಂಕಿನ ಮೂಲ ಯಾವುದು ಎಂಬುದು ದೃಢವಾಗಿಲ್ಲ.. ಇವರು ಪ್ರಥಮ ಚಿಕಿತ್ಸೆ ಪಡೆದ ಕಲ್ಲಡ್ಕ ದ ಖಾಸಗಿ ಆಸ್ಪತ್ರೆಯ ನ್ನು ಸೋಮವಾರದಿಂದ ಸೀಲ್ ಡೌನ್ ಮಾಡಲಾಗಿದೆ. ಮೃತ ವ್ಯಕ್ತಿಯ ಪುತ್ರ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.ಇದರೊಂದಿಗೆ ದ.ಕ ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.