ಸ್ವಭಾಷಾ ಕನ್ನಡಸಂಘ ಉದ್ಘಾಟನೆ: ಸ್ವಭಾಷೆಯಲ್ಲಿ ಮಾತ್ರ ಭಾವನಾತ್ಮಕವಾಗಿ ಸ್ಪಂದನೆ ಸಾಧ್ಯ-ಜಯಾನಂದ ಪೆರಾಜೆ…

ವಿಟ್ಲ, ಜೂ.27 : ಸಂಸ್ಕೃತಿಯ ಬೇರು ಭಾಷೆ. ತಾಯಿನುಡಿ ಶ್ರೇಷ್ಠ. ಸ್ವಭಾಷೆಯಲ್ಲಿ ಮಾತನಾಡಿದಾಗ ಮಾತ್ರ ಭಾವನಾತ್ಮಕವಾಗಿ ಸ್ಪಂದಿಸಲು ಸಾಧ್ಯವಾಗುವುದು . ಯಾವುದೇ ಭಾಷೆಯಲ್ಲಿ ವ್ಯವಹಾರ ಮಾಡಿದರೂ ಮಾತೃ ಭಾಷೆಯನ್ನು ಮರೆಯಬಾರದು. ಕನ್ನಡ ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಒಂದಾಗಿದ್ದು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದರೂ ಕನ್ನಡ ಸಾಹಿತ್ಯವನ್ನು ಓದುವ ಮೂಲಕ ನಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳಬೇಕಾಗಿದೆ ಎಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಹೇಳಿದರು.
ಅವರು ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯದ ಬೆಳ್ಳಿಹಬ್ಬದ ಸಂಭ್ರಮದ ಅಂಗವಾಗಿ ಸ್ವಭಾಷಾ ಕನ್ನಡ ಸಂಘದ ಉದ್ಘಾಟನಾ ಸಂದರ್ಭದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದರು.
ಕವಯಿತ್ರಿ ಸಂಧ್ಯಾ ಗೀತ ಬಾಯಾರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಹಿರಿಯ ಗಝಲ್ ಕವಿ ಡಾ.ಸುರೇಶ ನೆಗಳಗುಳಿ ಅತಿಥಿಯಾಗಿ ಮಾತನಾಡಿ ಕನ್ನಡ ಭಾಷೆಯಲ್ಲಿ‌ಆಂಗ್ಲ ಭಾಷೆಯ ಬಳಕೆ ಕಡಿಮೆ ಮಾಡಬೇಕು. ದಿನನಿತ್ಯದ ವ್ಯವಹಾರದಲ್ಲಿ ಅನಗತ್ಯವಾಗಿ ಆಂಗ್ಲಪದ ಬಳಕೆಯಾಗುತ್ತಿದ್ದು ಭಾಷಾ ಶುದ್ಧತೆಯ ಕಡೆಗೆ ಗಮನ ಹರಿಸಬೇಕೆಂದರು.ಈ ಸಂದರ್ಭದಲ್ಲಿ ಅವರು ಶಾಲಾಗ್ರಂಥಾಲಯಕ್ಕೆ ಪುಸ್ತಕಗಳನ್ನು ಶಾಲಾ ಸಂಚಾಲಕರಿಗೆ ಹಸ್ತಾಂತರಿಸಿದರು.
ಗುರು ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ, ಶಾಲಾಸಂಚಾಲಕ ಈಶ್ವರ ಪ್ರಸಾದ್ ಸಮಾರಂಭದ‌ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳ ಕಲಿಕೆಗೆ ಭಾಷಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕೆಂದರು.
ಆಡಳಿತಾಧಿಕಾರಿ ಮಧುರಾ ಈಶ್ವರ್ ಪ್ರಸಾದ್ ವಿದ್ಯಾರ್ಥಿ ಸಂಘದ ಪದಾಧಿಕಾರಗಳ ಘೋಷಣೆ ಮಾಡಿ ಪ್ರತಿಜ್ಞಾವಿಧಿ ಬೋಧಿಸಿದರು.
ಕನ್ನಡ ಸಂಘದ ಅಧ್ಯಕ್ಷರಾಗಿ ಸಂತ್ರಪ್ತ ಭಟ್ ಐ ಕೆ, ಕಾರ್ಯದರ್ಶಿಯಾಗಿ ಸೃಷ್ಟಿ ಕೆ ಎಂ ಹಾಗೂ ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ‌ಸರಸ್ವತಿ‌ ಉಪಸ್ಥಿತರಿದ್ದು ಸಹಕರಿಸಿದರು . ವಿದ್ಯಾರ್ಥಿ ಗಳು ಸ್ವರಚಿತ ಕವನ ವಾಚಿಸಿದರು.
ವಿದ್ಯಾರ್ಥಿಗಳಾದ ಪ್ರತಿಕ್ಷಾ ಸ್ವಾಗತಿಸಿ, ಶ್ರಾವ್ಯ ವಂದಿಸಿ, ಸೃಷ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.‌ಶಿಕ್ಷಕಿಯರು ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದರು.

Related Articles