ಬಿಸಿರೋಡ್ ಬಸ್ ನಿಲ್ದಾಣದಲ್ಲಿ ಯುವತಿಯನ್ನು ಇರಿದು ಹತ್ಯೆ, ಯುವಕ ಪರಾರಿ…

ಬಂಟ್ವಾಳ:ಯುವತಿಯೋರ್ವಳನ್ನು ಮಾರಕಾಯುಧದಿಂದ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಂಟ್ವಾಳದ ಬಿಸಿರೋಡಿನ ಕೆ.ಎಸ್.ಆರ್.ಟಿ.ಸಿ .ಬಸ್ಸು ನಿಲ್ದಾಣ ದಲ್ಲೇ ಗುರುವಾರ ಸಂಜೆ ನಡೆದಿದೆ.
ಮೃತ ಯುವತಿಯನ್ನು ಬಂಟ್ವಾಳ ತಾಲೂಕಿನ ಉಳಿಗ್ರಾಮದ ನಿವಾಸಿ ಲಾವಣ್ಯ(21) ‌ಎಂದು ಗುರುತಿಸಲಾಗಿದೆ.
ಇರಿದು ಪರಾರಿಯಾದ ಯುವಕ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿ ಚೇತನ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪ್ರೀತಿಸಲು ನಿರಾಕರಿಸಿದ್ದೇ ಘಟನೆಗೆ ಕಾರಣವೆನ್ನಲಾಗುಗುತ್ತಿದ್ದು ಸತ್ಯಸಂಗತಿ ತನಖೆಯಿಂದ ತಿಳಿದುಬರಬೇಕಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಭೇಟಿ ನೀಡಿ ಆರೋಪಿಯನ್ನು ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು ತನಿಖಾ ತಂಡ ರಚಿಸಲಾಗಿದೆ. ಘಟನೆ ನಡೆದು ಕೆಲವೇ ಕ್ಷಣಗಳಲ್ಲಿ ಜಾಲತಾಣಗಳಲ್ಲಿ ಹರಿದಾಡಿದ್ದು ಘಟನೆಯ ಗಂಭೀರತೆಗೆ ಸಾಕ್ಷಿಯಾಗಿದೆ.ಯುವಕ ಯುವತಿಯನ್ನು ಕೊಚ್ಚಿ ಕೊಲೆಮಾಡಿ ಪರಾರಿಯಾಗುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ .
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪುರಿ ಜಗನ್ನಾಥನ ತೀರ್ಥಯಾತ್ರೆಯಲ್ಲಿದ್ದು ಘಟನೆಯ ಬಗ್ಗೆ ತಿಳಿದುಕೊಂಡು ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

whatsapp image 2026 07 16 at 11.28.42 pm

whatsapp image 2026 07 16 at 11.28.43 pm

Related Articles