ಈ ಮಣ್ಣು ನಮ್ಮದು – ಎಸ್.ವೈ.ಎಸ್, ಎಸ್ಸೆಸ್ಸೆಫ್ ನಿಂದ ಸ್ವಾತಂತ್ರ್ಯ ದಿನಾಚರಣೆ…

ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ) ಹಾಗೂ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಗಾಂಧಿನಗರ ಶಾಖೆಯ ವತಿಯಿಂದ ಭವ್ಯ ಭಾರತದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಕೆ.ಸಿ.ಎಫ್ ರಿಯಾದ್ ಝೋನ್ ನಾಯಕ ಎಸ್.ಎಂ ಹಮೀದ್ ಧ್ವಜಾರೋಹಣಗೈದರು. ಸಯ್ಯಿದ್ ತಾಹಿರ್ ಸಅದಿ ಬಾಅಲವಿ ದುಆ ನೆರೆವೇರಿಸಿದರು.
ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ ಸಖಾಫಿ ಬೀಜಕೊಚ್ಚಿ *ಈ ಮಣ್ಣು ನಮ್ಮದು* ಪ್ರಮೇಯ ಭಾಷಣಗೈದರು. ಸುಳ್ಯ ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷರಾದ ಆದಂ ಹಾಜಿ ಕಮ್ಮಾಡಿ, ಮುನವ್ವಿರುಲ್ ಇಸ್ಲಾಂ ಅರಬಿಕ್ ಸ್ಕೂಲ್ ಉಸ್ತುವಾರಿಗಳಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಅಬ್ದುರ್ರಹ್ಮಾನ್ ಹಾಜಿ ಕಯ್ಯಾರ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷರಾದ ಶುಕೂರ್ ಹಾಜಿ, ಅಶ್ರಫ್ ಸಖಾಫಿ ಕುಂಭಕ್ಕೋಡ್ ಮುಖ್ಯ ಅತಿಥಿಗಳಾಗಿದ್ದರು.
ಎಸ್.ವೈ.ಎಸ್ ನಾಯಕರಾದ ಸಿದ್ದೀಖ್ ಕಟ್ಟೆಕಾರ್, ಮುಹಮ್ಮದ್ ಕಲ್ಲುಮುಟ್ಲು, ಹಾರಿಸ್ ಸಿ.ಎ, ಮುಹಮ್ಮದ್ ಪೈಂಟ್, ಅಬೂಬಕರ್ ವೈಟ್, ಜಮಾಲ್ ಗುರುಂಪು, ಎಸ್ಸೆಸ್ಸೆಫ್ ನಾಯಕರಾದ ಸಫ್ವಾನ್ ಸುಣ್ಣಮೂಲೆ, ಸಿದ್ದೀಖ್ ಬಿ.ಎ, ನಾಫಿ ಕರೆಮೂಲೆ, ಸೈಫುದ್ದೀನ್ ಅಶ್ರಫಿ, ಸ್ವಾದಿಖ್ ಪಿ.ಜಿ, ಇಲ್ಯಾಸ್ ಗುರುಂಪು, ಶಿಬಿಲಿ ವೆಲ್ಕಂ, ಇರ್ಫಾನ್, ಫಾಯಿಝ್ ಉದ್ಯಮಿಗಳಾದ ಫಖ್ರುದ್ದೀನ್ ಯುನಿಟಿ, ಖಾದರ್ ಉಪಸ್ಥಿತರಿದ್ದರು. ನೌಶಾದ್ ಕೆರೆಮೂಲೆ ಸ್ವಾಗತಿಸಿ ಬಶೀರ್ ಕಲ್ಲುಮುಟ್ಲು ವಂದಿಸಿದರು.

IMG 20200815 WA0006 300x169

Related Articles

Leave a Reply

Your email address will not be published. Required fields are marked *